Tuesday, May 17, 2022

ಆರೋಗ್ಯ ಇಲಾಖೆ ಸಿಬ್ಬಂದಿ ಎಡವಟ್ಟು: ಸತ್ತವರ ಹೆಸರಲ್ಲಿ ವ್ಯಾಕ್ಸಿನೇಷನ್​ ರಿಪೋರ್ಟ್​

Must read

ಯಾದಗಿರಿ: ಕೊರೊನಾ ಲಸಿಕೆ ವಿತರಣೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮಹಾ ಎಡವಟ್ಟು ಮಾಡಿದ್ದು, ಸತ್ತವರ ಹೆಸರಿನಲ್ಲಿ ಕೊರೊನಾ ಲಸಿಕೆ ನೀಡಿದ್ದಾರೆ.

ದೋರನಹಳ್ಳಿಯ ನಿವಾಸಿ ಮುರಾರಿ ರಾವ್ ಶಿಂಧೆಯವರು 23-05-2021 ರಂದು ಮರಣ ಹೊಂದಿದ್ದಾರೆ. ಇವರ ಹೆಸರಿನಲ್ಲಿ 04-08-2021ರಂದು ಎರಡನೇ ಡೋಸ್ ಲಸಿಕೆ ನೀಡಿದ ಸರ್ಟಿಫಿಕೇಟ್ ನೀಡಿದ್ದಾರೆ.  ಅಲ್ಲದೇ 4 ತಿಂಗಳ ಹಿಂದೆ ಮೃತಪಟ್ಟ ಯಮನಪ್ಪ ಎನ್ನುವವರ ಹೆಸರಿನಲ್ಲಿ 02-11-2021ರಂದು ಕೋವಿಡ್​ ನೆಗೆಟಿವ್​ ರಿಪೋರ್ಟ್​ ನೀಡಿದ್ದಾರೆ.

ಜಿಲ್ಲಾ ಆರೋಗ್ಯ ಇಲಾಖೆಯ ಎಡವಟ್ಟಿನಿಂದ ಮೃತರ ಕುಟುಂಬದವರು ಆತಂಕಕ್ಕೊಳಗಾಗಿದ್ದು, ಅಧಿಕಾರಿಗಳು ಲಸಿಕೆ  ಗುರಿ ಸಾಧನೆಯ ಧಾವಂತಕ್ಕೆ ಬಿದ್ದು ಸುಳ್ಳು ಸರ್ಟಿಫಿಕೇಟ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು ವ್ಯಾಕ್ಸಿನೇಷನ್‌ ಮೇಳದ ಸಂದರ್ಭದಲ್ಲಿ ಜಿಲ್ಲೆಯ ಬಹುತೇಕ ಜನರು ವಲಸೆ ಹೋಗಿದ್ದರು. ಹೀಗಾಗಿ  ಸುಳ್ಳು ಲೆಕ್ಕ ತೋರಿಸಿ ಅಧಿಕಾರಿಗಳು ಬಚಾವ್ ಆಗಲು ಯತ್ನಿಸಿದ್ದಾರೆ ಎನ್ನಲಾಗಿದೆ.

Latest article