ಯಾದಗಿರಿ: ಆ ಗ್ರಾಮ ಪಂಚಾಯತ್ ಈಗ ಕೋವಿಡ್ ಲಸಿಕೆ ಮುಕ್ತ ಪಂಚಾಯತ್ ಆಗಿದೆ. ಕೊರೊನಾ ಲಸಿಕೆ ಪಡೆಯಲು ಹೀಂದೆಟು ಹಾಕುವ ಬದಲು ಗ್ರಾಮಸ್ಥರು ಕೋವಿಡ್ ಬಗ್ಗೆ ಜಾಗೃತರಾಗಿ ಕೊರೊನಾ ಲಸಿಕೆ ಪಡೆದು ಕೊರೊನಾ ಮುಕ್ತ ಪಂಚಾಯತ್ಗೆ ಜನರು ಪಣತೊಟ್ಟಿದ್ದಾರೆ. ರಾಜ್ಯದಲ್ಲಿಯೇ ಮೊದಲ ಗ್ರಾಮ ಪಂಚಾಯತ್ ಕೋವಿಡ್ ಲಸಿಕೆ ಮುಕ್ತ ಪಂಚಾಯತ್ ಆಗಿದೆ. ಅದ್ಹೆಗೆ ಲಸಿಕೆ ಮುಕ್ತ ಪಂಚಾಯತ್ ಆಗಿದೆ.
ಹೀಗೆ ಈಡೀ ಊರನ್ನೇ ಕೋವಿಡ್ ಲಸಿಕೆ ಮುಕ್ತ ಮಾಡಲು ಖುದ್ದು ಜನಪ್ರತಿನಿಧಿ ಹಾಗೂ ಅಧಿಕಾರಿ, ಸಿಬ್ಬಂದಿ ವರ್ಗದವರು ಕೈಯಲ್ಲಿ ಮೈಕ್ ಹಿಡಿದು ಜಾಗೃತಿ ಮೂಡಿಸುವ ದೃಶ್ಯ. ಜಾಗೃತಿ ಮೂಡಿಸಿ ಈಗ ಪ್ರತಿಶತ 100ರಷ್ಟು ಫಲಾನುಭವಿಗಳಿಗೆ ಲಸಿಕೆ ನೀಡಿ, ಈಗ ರಾಜ್ಯದಲ್ಲಿಯೇ ತಿಂಥಣಿ ಗ್ರಾಮ ಪಂಚಾಯತ್ ಮಾದರಿ ಪಂಚಾಯತ ಆಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರು ಹಳ್ಳಿಗಳು ಬರುತ್ತವೆ. ತಿಂಥಣಿ, ತಾದಲಾಪುರ, ಶಾಂತಪುರ, ಹುಣಸಿಹೊಳೆ, ನಿಂಗದಹಳ್ಳಿ, ಬಂಡೋಳ್ಳಿ ಎಲ್ಲಾ ಗ್ರಾಮದ ಫಲಾನುಭವಿಗಳು ಲಸಿಕೆ ಪಡೆದಿದ್ದಾರೆ. ತಿಂಥಣಿ ಗ್ರಾಮ ಪಂಚಾಯತ ಈಗ ರಾಜ್ಯಕ್ಕೆ ಮಾದರಿಯಾಗಿದೆ. ಕೇವಲ 15 ದಿನದೊಳಗೆ ಲಸಿಕೆ ಮುಕ್ತ ಪಂಚಾಯತ್ ಆಗಿದೆ. ರಾಜ್ಯದ ಬಹುತೇಕ ಕಡೆ ಕೋವಿಡ್ ಲಸಿಕೆ ಪಡೆಯಲು ಭಯಪಟ್ಟು ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ಬೇದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಆದರೆ, ಈ ಪಂಚಾಯತನ ಹಳ್ಳಿಗಳಲ್ಲಿ ಮಾತ್ರ ಆರೋಗ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರ ಮಾತು ಕೇಳಿ ಜಾಗೃತ ವಹಿಸಿ ಲಸಿಕೆ ಪಡೆದಿದ್ದಾರೆ. ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಅವರ ಖಡಕ್ ಸೂಚನೆ ಮೆರೆಗೆ ಆರೋಗ್ಯ, ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಜನರಿಗೆ ಜಾಗೃತಿ ಮೂಡಿಸಿ ಲಸಿಕೆ ನೀಡಿದ್ದಾರೆ. ಖುದ್ದು ಜನಪ್ರತಿನಿಧಿಗಳು ಕೂಡ ಕೈಯಲ್ಲಿ ಮೈಕ್ ಹೀಡಿದು ಜಾಗೃತಿ ಮೂಡಿಸಿದ್ದಾರೆ. ಸುರಪುರ ಶಾಸಕ ರಾಜುಗೌಡ ಅವರ ಪಾತ್ರ ಕೂಡ ಪ್ರಮುಖವಾಗಿದೆ.
ಇನ್ನೂ ತಿಂಥಣಿ ಪಂಚಾಯತ ವ್ಯಾಪ್ತಿಯಲ್ಲಿ 9 ಸಾವಿರ ಜನಸಂಖ್ಯೆ ಇದ್ದು,ಅದರಲ್ಲಿ 2 ಸಾವಿರ ಜನ ಬೃಹತ್ ನಗರಗಳತ್ತ ವಲಸೆ ಹೋಗಿದ್ದಾರೆ. ಸದ್ಯಕ್ಕೆ 18 ಹಾಗೂ 45 ವರ್ಷ ಮೇಲ್ಪಟ್ಟವರಿದ್ದು ಅರ್ಹ ಫಲಾನುಭವಿಗಳಾದ 4200 ಜನರು ಲಸಿಕೆ ಪಡೆದಿದ್ದಾರೆ. ಲಸಿಕೆ ಪಡೆದು ಕೊರೊನಾ ಮುಕ್ತ ಮಾಡಲು ಗ್ರಾಮಸ್ಥರು ಪಣತೊಟ್ಟಿದ್ದಾರೆ. ಮೊದಲನೇ ಕೊರೊನಾ ಅಲೆಯಲ್ಲಿ ತಿಂಥಣಿ ಪಂಚಾಯತನಲ್ಲಿ 28 ಪ್ರಕರಣಗಳು ಪತ್ತೆಯಾಗಿದ್ದವು, ಓರ್ವ ವ್ಯಕ್ತಿ ಕೋವಿಡ್ ಗೆ ಬಲಿಯಾಗಿದ್ದನು. ಮತ್ತೆ ಕೊರೊನಾ ಎರಡನೇ ಅಲೆಯಲ್ಲಿ 56 ಪ್ರಕರಣಗಳು ಪತ್ತೆಯಾಗಿದ್ದವು.ಹೀಗಾಗಿ ಮತ್ತೆ ಮುಂಬರುವ ಮೂರನೇ ಕೊರೊನಾ ಅಲೆಗೆ ಜನರು ತತ್ತರಿಸಬಾರದೆಂದು ಅರಿತು, ಜನರು, ಮೂರನೇ ಅಲೆ ಎದುರಿಸುವ ಮುನ್ನವೇ ಪ್ರತಿಶತ 100 ರಷ್ಟು ಜನ ಲಸಿಕೆ ಪಡೆದು ಕೊರೊನಾ ಮುಕ್ತ ಮಾಡಲು ಜನರೇ ಪಣತೊಟ್ಟಿದ್ದಾರೆ. ತಿಂಥಣಿ ಜನರ ಕಾರ್ಯಕ್ಕೆ ಸುರಪುರ ಶಾಸಕ ರಾಜುಗೌಡ ಅವರು ಮೆಚ್ಚುಗೆ ವ್ಯಕ್ತಪಡಿಸಿ ಲಸಿಕೆ ಮುಕ್ತವಾಗಿದಕ್ಕೆ ಪಂಚಾಯತ್ಗೆ 25 ಲಕ್ಷ ರೂ ಘೋಷಣೆ ಮಾಡಿದ್ದಾರೆ.
ಒಟ್ಟಾರೆಯಾಗಿ ಅಧಿಕಾರಿ ,ಜನಪ್ರತಿನಿಧಿ ಹಾಗೂ ಗ್ರಾಮಸ್ಥರು ಮನಸ್ಸು ಮಾಡಿದ್ರೆ ಏನಾದ್ರೂ ಸಾಧಿಸಬಹುದಾಗಿದೆ.ಲಸಿಕೆ ಪಡೆಯಲು ಭಯಪಡದೇ ಕೊವೀಡ್ ಬಗ್ಗೆ ಜಾಗೃತರಾಗಿ ಲಸಿಕೆ ಪಡೆದು ಮಾದರಿ ಪಂಚಾಯತ ಮಾಡಿದ ಜನರ ಕಾಳಜಿಗೆ ಮೆಚ್ಚುವಂತಾಗಿದೆ.ಯಾರು ಕೂಡ ಭಯಪಡದೇ ಲಸಿಕೆ ಪಡೆದು ದೇಶದಿಂದ ಕೋವಿಡ್ ಓಡಿಸುವ ಕೆಲಸ ಮಾಡಬೇಕಿದೆ.