Tuesday, May 17, 2022

ಮೊಬೈಲ್​ ಕಳ್ಳತನ ದಂಧೆ: 40 ಫೋನ್​ಗಳ ಸಮೇತ ಆರೋಪಿಗಳು ಅಂದರ್​

Must read

ಯಾದಗಿರಿ: ಮಕ್ಕಳನ್ನು ಬಳಸಿಕೊಂಡು ಮೊಬೈಲ್​ ಕಳ್ಳತನ ದಂಧೆ ನಡೆಸುತ್ತಿದ್ದ ಆರೋಪಿಗಳನ್ನು ಯಾದಗಿರಿ ಪೊಲೀಸರು ಬಂಧಿಸಿದ್ದಾರೆ. ತೆಲಂಗಾಣ ಮೂಲದ ಆನಂದ ಹಾಗೂ ಆಶ್ವಿನಿ ಬಂಧಿತ ಆರೋಪಿಗಳು.

ನಗರದ ಹಳೆ ಬಸ್ ನಿಲ್ದಾಣದ ಮುಂಭಾಗದಲ್ಲಿ ನಿಂತಿದ್ದ ಆರೋಪಿಗಳ ಚಲನವಲನ ಕಂಡು ಅನುಮಾನಗೊಂಡ ಯಾದಗಿರಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಾರಿನಲ್ಲಿ ವಿವಿಧ ಕಂಪನಿಗಳ 40 ಮೊಬೈಲ್ ಫೋನ್​​ ಪತ್ತೆಯಾಗಿದ್ದು, ಕೂಡಲೇ ಪೊಲೀಸರು ಖದೀಮರನ್ನು ಬಂಧಿಸಿದ್ದಾರೆ. ಇನ್ನು ಆರೋಪಿಗಳು ಮಕ್ಕಳನ್ನು ಬಳಸಿಕೊಂಡು ಬೆಳಗಾವಿ,ಬಳ್ಳಾರಿ,ಬಾಗಲಕೋಟ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಕಳ್ಳತನ ನಡೆಸಿದ್ದಾರೆ ಎನ್ನಲಾಗಿದೆ.

ಸದ್ಯ ಬಂಧಿತ ಆರೋಪಿಗಳಿಂದ ₹2 ಲಕ್ಷ ಬೆಲೆ ಬಾಳುವ 40 ಮೊಬೈಲ್ ಫೋನ್​ಗಳು ಹಾಗೂ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Latest article