Tuesday, May 17, 2022

ಮಹಿಳೆಯನ್ನು ನಗ್ನಗೊಳಿಸಿ ಮನಬಂದಂತೆ ಥಳಿಸಿದ ದುರುಳರು..!

Must read

ಯಾದಗಿರಿ: ಯುವಕರ ಗುಂಪೊಂದು ಮಹಿಳೆಯನ್ನು ನಗ್ನಗೊಳಿಸಿ ಮನಬಂದಂತೆ ಥಳಿಸಿರುವ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ.

4 ರಿಂದ 5ಜನರ ಗುಂಪಿನಿಂದ ಮಹಿಳೆಯ ಮೇಲೆ ದೌರ್ಜನ್ಯ ನಡೆದಿದ್ದು, ಮಹಿಳೆಗೆ ಕಿರುಕುಳ ನೀಡಿರುವ ವಿಡಿಯೋ ವೈರಲ್ ಆಗಿದೆ. ವೈರಲ್ ಆದ ವಿಡಿಯೋದಲ್ಲಿ ಮಹಿಳೆ ಕೈಮುಗಿದು ಕಣ್ಣೀರು ಹಾಕಿದ್ದು, 4-5 ಜನರ ಗುಂಪು ಮಹಿಳೆಯ ಮೇಲೆ ಸ್ವಲ್ಪವೂ ಕನಿಕರ ತೋರಿಸದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.

ಮಹಿಳೆ ಕೈಮುಗಿದು ಕಣ್ಣೀರು ಹಾಕಿದ್ರು ಬಿಡದೆ ನಗ್ನಗೊಳಿಸಿ ಚಿತ್ರಹಿಂಸೆ ನೀಡಿದ್ದಾರೆ. ವಿಡಿಯೋದಲ್ಲಿ ಚಟ್ನಳ್ಳಿ ಹಾಗೂ ಹಳಿಸಗರ ಗ್ರಾಮಗಳ ಹೆಸರು ಬಳಕೆ ಮಾಡಿದ್ದು, ಈ ಎರಡು ಗ್ರಾಮಗಳ ಸುತ್ತಮುತ್ತ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

Latest article