Tuesday, May 17, 2022

ಬಿಜೆಪಿ ಶಾಸಕನಿಂದಲೇ ರೈತನಿಗೆ ವಂಚನೆ ಆರೋಪ

Must read

ಯಾದಗಿರಿ : ಕೊಪ್ಪಳ ಜಿಲ್ಲೆಯ ಕನಕಗಿರಿ ಶಾಸಕ ಬಸವರಾಜ್ ದಡೇಸಗೂರು ಹಾಗೂ ಅವರ ಆಪ್ತ ರೈತನಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಆರೋಪ ಕೇಳಿ ಬಂದಿದೆ.

ಶಾಸಕರ ಆಪ್ತ ಭೋಗೇಶ್ ನಾಯಕ ಎನ್ನುವಾತ ಯಾದಗಿರಿ ಜಿಲ್ಲೆಯ ರೈತ ದೇವೇಂದ್ರಪ್ಪ ಉಜರತ್ತಿ ಎನ್ನುವವರಿಗೆ ₹25 ಲಕ್ಷ ಹಣ ನೀಡದೆ ವಂಚಿಸಿದ್ದಾರೆ ಎನ್ನಲಾಗಿದೆ.

ಭೋಗೇಶ್ ನಾಯಕ್, ಕಳೆದ ವರ್ಷ ರೈತನಿಂದ ₹25 ಲಕ್ಷದ ಭತ್ತವನ್ನು ಖರೀದಿಸಿ , ಚೆಕ್ ಹಾಗೂ ಅಗ್ರಿಮೆಂಟ್ ಕಾಪಿ ನೀಡಿದ್ದರು. ಆದರೆ ಶಾಸಕರ ಆಪ್ತ ಕೊಟ್ಟಿರುವ ಚೆಕ್ ​ಬೌನ್ಸ್​ ಆಗಿದೆ. ಇದರಿಂದ ರೈತ ಕಂಗಾಲಾಗಿದ್ದು, ಭೋಗೇಶ್​​ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಶಾಸಕ ದಡೇಸಗೂರು ಮಧ್ಯಸ್ಥಿಕೆ ವಹಿಸಿದ್ದಾರೆ. ಈ ಮಾತುಕತೆಯ ನಂತರವೂ ಹಣ ಸಿಗದೇ ಇದ್ದಾಗ, ರೈತ ನೇರವಾಗಿ ಶಾಸಕರಿಗೆ ಕರೆ ಮಾಡಿದ್ದಾರೆ. ಈ ವೇಳೆ ಶಾಸಕರು ಆ ವಿಚಾರಕ್ಕೂ ನನಗೂ ಸಂಭಂದವಿಲ್ಲ ಎಂದಿದ್ದಾರೆ ಎನ್ನಲಾಗಿದೆ. ಅಲ್ಲದೇ ಭೋಗೇಶ್ ಕೂಡ ರೈತನಿಗೆ ಧಮ್ಕಿ ಹಾಕಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ದೇವೇಂದ್ರಪ್ಪ ಸಾಲ ಮಾಡಿ ಭತ್ತ ಖರೀದಿಸಿ ಭೋಗೇಶ್ ನಾಯಕನಿಗೆ ಮಾರಾಟ ಮಾಡಿದ್ದರು. ಹೀಗಾಗಿ ಒಂದು ವೇಳೆ ಹಣ ಸಿಗದಿದ್ದರೇ, ಶಾಸಕ ಹಾಗೂ ಆಪ್ತ ಭೋಗೇಶ್ ಹೆಸರು ಬರೆದಿಟ್ಟು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Latest article