Tuesday, May 17, 2022

ಜನಪ್ರತಿನಿಧಿಗಳಿಗೆ ನೋವು ತೋಡಿಕೊಂಡ ರೈತನ ವಿರುದ್ಧ FIR

Must read

ಯಾದಗಿರಿ: ಜನಪ್ರತಿನಿಧಿಗಳಿಗೆ ತಮ್ಮ ನೋವನ್ನ ತೋಡಿಕೊಂಡು ಪ್ರಶ್ನೆ ಮಾಡಿದ ರೈತನ ವಿರುದ್ಧ ಎಫ್​ಐಆರ್​ ದಾಖಲಾಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಶಹಾಪುರ ತಾಲೂಕಿನ ಕೊಳ್ಳುರು ಗ್ರಾಮದ ರೈತ ಬಸಪ್ಪ ಭಂಗಿ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್.ಶಂಕರ್ ಹಾಗೂ ಶಾಸಕ ವೆಂಕಟರೆಡ್ಡಿ ಮುದ್ನಾಳ ಕೊಳ್ಳರು ಸೇತುವೆ ಮುಳುಗಿದ ಹಿನ್ನಲೆಯಲ್ಲಿ ಪರಿಶೀಲನೆಗೆ ಬಂದಿದ್ದರು. ಈ ವೇಳೆ ಬಸಪ್ಪ ಭಂಗಿ ಜನಪ್ರತಿನಿಧಿಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ಘಟನೆ ಬಳಿಕ ಅವಾಚ್ಯ ಶಬ್ದಗಳಿಂದ ಮಾಜಿ ಸಚಿವ ಆರ್.ಶಂಕರ್​ಗೆ ನಿಂದನೆ ಮಾಡಲಾಗಿದೆ ಎಂದು ಬಸಪ್ಪ ವಿರುದ್ಧ ಶಹಾಪುರ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Latest article