Wednesday, May 18, 2022

9/11 ದಾಳಿ ಪ್ರಕರಣ: ಸೌದಿ ಅಧಿಕಾರಿಗಳು ಸಾಕ್ಷ್ಯ ನೀಡಬೇಕು – ಯುಎಸ್​ ಕೋರ್ಟ್​

Must read

ನ್ಯೂಯಾರ್ಕ್‌: ವಿಶ್ವ ವಾಣಿಜ್ಯ ಕೇಂದ್ರ(World Trade Center)ದ ಮೇಲೆ 2001ನೇ ಇಸವಿ ಸೆ‍ಪ್ಟೆಂಬರ್‌ 11ರಂದು ನಡೆದ ದಾಳಿಗೆ ಸಂಬಂಧ ಸಾಕ್ಷ್ಯ ಹೇಳುವಂತೆ ಸೌದಿ ಅರೇಬಿಯಾ ರಾಜಮನೆತನದ ಒಬ್ಬ ಸ‌ದಸ್ಯ ಸೇರಿದಂತೆ ಕೆಲ ಹಾಲಿ ಮತ್ತು ಮಾಜಿ ನೌಕರರಿಗೆ ಅಮೆರಿಕದ ನ್ಯಾಯಾಲಯ ನಿರ್ದೇಶಿಸಿದೆ.

ಈ ವಿಚಾರಕ್ಕೆ ಸಂಬಂಧ ಆದೇಶ ಹೊರಡಿಸಿರುವ ನ್ಯಾಯಮೂರ್ತಿ ಸಾರಾ ನೆಟ್‌ಬರ್ನ್‌ ಅವರು, ಕೋರ್ಟ್‌ಗೆ ಹಾಜರಾಗಿ ಸಾಕ್ಷ್ಯ ದಾಖಲಿಸಲು ಆರೋಪಿಗಳಿಗೆ ಸೌದಿ ಅರೇಬಿಯಾ ವ್ಯವಸ್ಥೆ ಕಲ್ಪಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಸೆಪ್ಟೆಂಬರ್​​ 11ರಂದು ದಾಳಿ ನಡೆಸಿದ್ದ ಅಲ್‌ಖೈದಾ ಉಗ್ರ ಸಂಘಟನೆಗೆ ಅಮೆರಿಕದಲ್ಲಿದ್ದ ಸೌದಿ ಅರೇಬಿಯಾ ಅಧಿಕಾರಿಗಳು ಸಹಾಯ ಮಾಡಿದ್ದರು ಎಂದು ಈ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳು ಆರೋಪಿಸಿವೆ. ಅಷ್ಟೇಅಲ್ಲದೇ, ಈ ಘಟನೆಗೆ ಭಾರಿ ಪ್ರಮಾಣದಲ್ಲಿ ಪರಿಹಾರ ಧನ ನೀಡುವಂತೆ ಕೋರಿ ಕೋರ್ಟ್‌ ಮೆಟ್ಟಿಲೇರಿವೆ.

ಅಂತೆಯೇ ಸೌದಿ ಅರೇಬಿಯಾ ರಾಜಮನೆತನದ ರಾಜಕುಮಾರ ಬಂದರ್‌ ಬಿನ್‌ ಸುಲ್ತಾನ್‌ ವಿರುದ್ಧವೂ ಆರೋಪವಿದೆ. ಬಂದರ್​ ಬಿ ಸುಲ್ತಾನ್​ ಅವರು, ಗುಪ್ತಚರ ವಿಭಾಗದ ಮಾಜಿ ಮುಖ್ಯಸ್ಥ. ಈ ಇಬ್ಬರು 1983ರಿಂದ 2005ರ ವರೆಗೆ ಅಮೆರಿಕದಲ್ಲಿ ಸೌದಿ ಅರೇಬಿಯಾದ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದರು ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ.

Latest article