Tuesday, May 17, 2022

20 ವರ್ಷಗಳ ಬಳಿಕ ಸಂಪೂರ್ಣವಾಗಿ ಅಫ್ಘಾನ್​ ತೊರೆದ ಅಮೆರಿಕ ಪಡೆ

Must read

ಕಾಬೂಲ್: ಅಮೆರಿಕ ಯೋಧರನ್ನೊಳಗೊಂಡ ಐದು ‘ಸಿ-17′ ವಿಮಾನಗಳು ಸೋಮವಾರ ಮಧ್ಯರಾತ್ರಿ ವೇಳೆಗೆ ಕಾಬೂಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳುವ ಮೂಲಕ 20 ವರ್ಷಗಳ ಬಳಿಕ ಅಮೆರಿಕ ಪಡೆಗಳು ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ತೊರೆದಿದೆ.

ಆಗಸ್ಟ್ 31ರ ಒಳಗೆ ತೆರವು ಕಾರ್ಯಾಚರಣೆ ಪೂರ್ಣಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದರು. ಅಫ್ಘಾನಿಸ್ತಾನದಿಂದ ಅಮೆರಿಕನ್ನರ ತೆರವುಗೊಳಿಸುವ ಸೇನಾ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಅಮೆರಿಕ ಸೇನೆಯ ಜನರಲ್ ಕೆನೆತ್ ಮೆಕೆಂಝಿ ಹೇಳಿದ್ದಾರೆ.

ಯುಎಸ್ ಯೋಧರು ಕಾಬೂಲ್ ವಿಮಾನ ನಿಲ್ದಾಣ ತೊರೆದಿದ್ದಾರೆ. ನಮ್ಮ ದೇಶ ಈಗ ಸಂಪೂರ್ಣ ಸ್ವತಂತ್ರಗೊಂಡಿದೆ ಎಂದು ತಾಲಿಬಾನ್ ವಕ್ತಾರ ಜಬಿಯುಲ್ಲಾ ಮುಜಾಹಿದ್ ಹೇಳಿದ್ದಾರೆ.

ಶಿವಪ್ರಸಾದ್ ಎಸ್ ಹಿರೇಮಠ, ಟಿವಿ5

Latest article