Tuesday, May 17, 2022

ಹೊಸ ತಳಿಯ ರೂಪಾಂತರಿ ಕೊರೊನಾ ವೈರಸ್ ಪತ್ತೆ

Must read

ಕೊರೊನಾ ಮತ್ತಷ್ಟು ತನ್ನ ಕಬಂದ ಬಾಹುಗಳನ್ನ ಚಾಚುತ್ತಲೇ ಇದೆ . ಈಗಾಗಲೇ ಜಗತ್ತಿನ ಇಡೀ ವ್ಯವಸ್ಥೆಯನ್ನೇ ತಲೆಕೆಳಗೆ ಮಾಡಿ ಆರ್ಥಿಕ ಸಂಕಷ್ಟಕ್ಕೆ ದೂಡಿದ ವೈರಸ್ ಹೊಸದೊಂದು ರೂಪ ತಾಳಿದೆ ‌.

ಕೊಲಂಬಿಯಾದಲ್ಲಿ ‘ಮ್ಯು’ ಎನ್ನುವ ಹೊಸ ರೂಪಾಂತರಿ ತಳಿಯ ಕೊರೊನಾ ವೈರಸ್ ಪತ್ತೆಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಈ ವೈರಸ್ ಮೇಲೆ ನಿಗಾ ಇಟ್ಟಿದೆ. ವೈಜ್ಞಾನಿಕವಾಗಿ  ಬಿ.1.621 ಎಂದು ಕರೆಯಲ್ಪಡುವ ‘ಮ್ಯು’ ತಳಿ ಮುಂದಿನ ದಿನಗಳಲ್ಲಿ ಅಪಾಯಕಾರಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಈ ವೈರಸ್​ ರೋಗ ನಿರೋಧಕ ಶಕ್ತಿಯನ್ನು ಕಣ್ತಪ್ಪಿಸಿ  ವೇಗವಾಗಿ ಹರಡುವ ಸಾಧ್ಯತೆ ಕೂಡ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ವೈರಸ್ ಜನವರಿ ತಿಂಗಳಲ್ಲಿ ದಕ್ಷಿಣ ಅಮೆರಿಕ ರಾಷ್ಟವಾದ ಕೊಲಂಬಿಯಾದಲ್ಲಿ ಮೊದಲು ಪತ್ತೆಯಾಗಿತ್ತು ಎನ್ನಲಾಗಿದೆ. 

ವರದಿ-ದಿವ್ಯಾ ರಘುನಾಥ್

Latest article