Tuesday, May 17, 2022

ಸೌದಿ ಅರೇಬಿಯಾದ ಏಪೋರ್ಟ್​ ಮೇಲೆ ಡ್ರೋನ್ ದಾಳಿ: 8 ಮಂದಿಗೆ ಗಾಯ

Must read

ದುಬೈ: ಸೌದಿ ಅರೇಬಿಯಾದ ಅಬಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಡ್ರೋನ್ ದಾಳಿ ನಡೆಸಲಾಗಿದೆ. ಈ ದುರ್ಘಟನೆಯಲ್ಲಿ 8 ಜನರಿಗೆ ಗಂಭೀರ ಗಾಯಗಳಾಗಿದ್ದು, ಏಪೋರ್ಟ್​ನಲ್ಲಿದ್ದ ನಾಗರಿಕ ವಿಮಾನಕ್ಕೆ ಹಾನಿಯಾಗಿದೆ.

ಅಬಾ ವಿಮಾನ ನಿಲ್ದಾಣದಲ್ಲಿ ಕಳೆದ 24 ಗಂಟೆಗಳಲ್ಲಿ ನಡೆಯುತ್ತಿರುವ ಎರಡನೇ ಡ್ರೋನ್ ದಾಳಿ ಇದಾಗಿದ್ದು, ಸೌದಿ ಅರೇಬಿಯಾದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಯೆಮೆನ್​ನಲ್ಲಿ ಇರಾನ್ ಬೆಂಬಲಿತ ಶಿಯಾ ಬಂಡುಕೋರರ ವಿರುದ್ಧ ಹೋರಾಡುತ್ತಿರುವ ಸೌದಿ ನೇತೃತ್ವದ ಮಿಲಿಟರಿ ಒಕ್ಕೂಟವು ದಾಳಿಯ ಬಗ್ಗೆ ವಿವರಿಸಲಿಲ್ಲ. ಜೊತೆಗೆ ಸಾವು-ನೋವುಗಳ ಬಗ್ಗೆಯೂ ವಿವರ ಒದಗಿಸಿರಲಿಲ್ಲ.

Latest article