Thursday, May 19, 2022

ಸರ್ಕಾರಿ ಇಲಾಖೆಯ ಮೇಲೆ ಸೈಬರ್ ಅಟ್ಯಾಕ್​..!

Must read

ವಾಷಿಂಗ್ಟನ್: ಅಮೆರಿಕದ ಸರ್ಕಾರಿ ಇಲಾಖೆಯ ಮೇಲೆ ಸೈಬರ್ ದಾಳಿಯಾಗಿದ್ದು, ಈ ಕುರಿತಂತೆ ರಕ್ಷಣಾ ಸೈಬರ್ ಕಮಾಂಡ್ ಇಲಾಖೆ ಎಚ್ಚರಿಕೆ ನೀಡಿದೆ. ಆದರೆ, ದಾಳಿಯ ವ್ಯಾಪ್ತಿ ಮತ್ತು ದಾಳಿಯ ಹಿಂದಿನ ದುಷ್ಕರ್ಮಿಗಳು ಸ್ಪಷ್ಟವಾಗಿಲ್ಲ ಎಂದು ಹೇಳಿದೆ. ಇನ್ನು, ದಾಳಿಯಿಂದಾಗಿ ಇಲಾಖೆಯ ಕಾರ್ಯಾಚರಣೆಗಳ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಿದೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.

ಇಲಾಖೆಯು ತನ್ನ ಮಾಹಿತಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಎಲ್ಲಾ ಮಾಹಿತಿಗಳನ್ನೂ ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಿರಂತರವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಭದ್ರತಾ ಕಾರಣಗಳಿಗಾಗಿ, ಈ ಸಮಯದಲ್ಲಿ ಯಾವುದೇ ಆಪಾದಿತ ಸೈಬರ್ ಭದ್ರತಾ ಘಟನೆಗಳ ಸ್ವರೂಪ ಅಥವಾ ವ್ಯಾಪ್ತಿಯನ್ನು ನಾವು ಚರ್ಚಿಸುವ ಸ್ಥಿತಿಯಲ್ಲಿಲ್ಲ ಎಂದು ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

Latest article