ದುಬೈ ಅಂದ ಕೂಡಲೇ ಅಲ್ಲಿನ ಐಷಾರಾಮಿ ಜೀವನ, ದೊಡ್ಡ ದೊಡ್ಡ ಕಟ್ಟಡಗಳು, ವಿಲಾಸಿ ಬದುಕು ಕಣ್ಣೆದುರು ಕಟ್ಟುತ್ತದೆ.ಅದರಲ್ಲೂ ಅಲ್ಲಿನ ರಾಜ ಮನೆತನ ಅದೆಷ್ಟು ಐಷಾರಾಮದ ಜೀವನ ನಡೆಸುತ್ತಿರಬಹುದು ಎಂಬ ಕುತೂಹಲ ಇದ್ದೆ ಇರುತ್ತದೆ.ನಾವೂ ಅಲ್ಲಿನ ರಾಜನ ಮನೆಯಲ್ಲಿ ಹುಟ್ಟ ಬಾರದಿತ್ತ ಅನ್ನೋ ಆಸೆ ಪ್ರತಿಯೊಬ್ಬರಿಗೂ ಆಗಿರುತ್ತದೆ.ಆದರೆ ಈ ಸ್ಟೋರಿ ಅಲ್ಲಿನ ರಾಜನ ಮಗಳ ಕರುಣಾಜನಕ ಕಥೆ..
ರಾಜಕುಮಾರಿ ಜಗತ್ತನ್ನು ನೋಡಲು ಬಯಸಿದ್ದಳು ಆದರೆ ಆಸ್ತಿ – ಅಂತಸ್ತು ಆಕೆಯನ್ನು ಹೊರಹೋಗದಂತೆ ಮಾಡಿತ್ತು. ರಾಜಕುಮಾರಿಯ ಐಷಾರಾಮಿ ಅರಮನೆಯು ಅವಳಿಗೆ ಜೈಲಾಗಿ ಮಾರ್ಪಟ್ಟಿತು. ನಾವು ದುಬೈನ ಅರಸ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಖ್ತೌಮ್ ಅವರ ಮಗಳಾದ ಶೇಖ್ ಲತೀಫಾ ಬಿಂಟ್ ಮೊಹಮ್ಮದ್ ಅಲ್ ಮಖ್ತೂಮ್ ಬಗ್ಗೆ ಮಾತನಾಡುತ್ತಿದ್ದೇವೆ. ರಾಜಕುಮಾರಿ ಲತೀಫಾ ತನ್ನ ಜೀವಕ್ಕೆ ಸಂಚಕಾರವಿದೆ ಎಂದು ಮಾತನಾಡಿ ಒಂದು ವಿಡಿಯೋವನ್ನು ಬಿಡುಗಡೆ ಮಾಡಿದ್ದಳು. ಅವತ್ತೇ ಅರಮನೆಯ ಪರಸ್ಥಿತಿ ಜನರ ಅರಿವಿಗೆ ಬಂದಿದ್ದು.ತಾನು ತನ್ನ ದೇಶದಲ್ಲಿ ಮಹಿಳೆಯರಿಗೆ ಸ್ವಾತಂತ್ರ ನೀಡಿದ್ದು ಇತರ ಇಸ್ಲಾಂ ದೇಶಗಳಿಗಿಂತಲೂ ಭಿನ್ನವಾಗಿರುವುದಾಗಿ ಸೌದಿ ಹೇಳಿಕೊಳ್ಳುತ್ತಿತ್ತು.ಆದರೆ ರಾಜಕುಮಾರಿ ಬಾತ್ ರೂಮ್ ವಿಡಿಯೋ ಬಯಲಾದ ನಂತರ ಅಲ್ಲಿನ ಅಸಲಿ ಸತ್ಯ ಹೊರ ಬಂತು.
ಯಾತನೆಯಲ್ಲಿ ಜೀವನ ನಡೆಸುತ್ತಿರುವ ರಾಜಕುಮಾರಿ, ತನ್ನ ವಿಲ್ಲಾ ತನಗೆ ಕಾರಾಗೃಹದಂತಾಗಿದೆ ಎಂದು ಹೇಳಿದ್ದರು. ಅವರಿಗೆ ಕಿಟಕಿ ತೆರೆಯಲು ಕೂಡ ಅವಕಾಶವಿರುತ್ತಿರಲಿಲ್ಲ. ಶೇಖ್ ಲತೀಫಾ ಬಿಂಟ್ ಮೊಹಮ್ಮದ್ ಅಲ್ ಮಖ್ತೂಮ್ ಹಲವು ವರ್ಷಗಳಿಂದ ಸ್ವಾತಂತ್ರ್ಯಕ್ಕಾಗಿ ಪರದಾಡಿದ್ದಳು.
ರಾಜಕುಮಾರಿ ಲತೀಫಾ ತನ್ನ ವಿಲ್ಲಾದ ಬಾತ್ ರೂಮ್ ನಲ್ಲಿ ವಿಡಿಯೋ ಮಾಡಿ, ‘ಈ ವಿಲ್ಲಾವನ್ನು ಪಂಜರವನ್ನಾಗಿ ಪರಿವರ್ತಿಸಲಾಗಿದೆ. ತಾಜಾ ಗಾಳಿಗಾಗಿ ನಾನು ಹೊರಗೆ ಹೋಗಲೂ ಸಾಧ್ಯವಿಲ್ಲ. ಕಿಟಕಿ ಕೂಡ ತೆರೆಯುವ ಹಾಗಿಲ್ಲ. ನಾನು ಈ ವಿಡಿಯೋವನ್ನು ಸ್ನಾನಗೃಹದಲ್ಲಿ ಮಾಡುತ್ತಿದ್ದೇನೆ. ನಾನು ಏಕಾಂಗಿಯಾಗಿರುವ ಏಕೈಕ ಕೊಠಡಿ ಇದು. ರಾಜಕುಮಾರಿಯು "ಈ ಪರಿಸ್ಥಿತಿಯಲ್ಲಿ ಬದುಕಲು ಸಾಧ್ಯವೇ" ಎಂದು ತಿಳಿದಿಲ್ಲ ಎಂದು ಬಿಡುಗಡೆ ಮಾಡಿದ್ದ ವಿಡಿಯೊದಲ್ಲಿ ಹೇಳಿದ್ದರು. ವಿಡಿಯೋದಲ್ಲಿ ಶೇಖ್ ಲತೀಫಾ, ‘ನಾನು ಯಾವಾಗ ಬಿಡುಗಡೆಯಾಗುತ್ತೇನೆ ಎಂದು ನನಗೆ ಗೊತ್ತಿಲ್ಲ. ಪ್ರತಿದಿನ ನಾನು ನನ್ನ ಜೀವನದ ಬಗ್ಗೆ ಚಿಂತಿಸುತ್ತಿದ್ದೇನೆ ಎಂದಿದ್ದರು..
ಬಿಬಿಸಿ ವೀಡಿಯೊವನ್ನು ಬಿಡುಗಡೆ ಮಾಡಿತು. ಲತಿಫಾ ವಿಲ್ಲಾದ ಶೌಚಾಲಯದಲ್ಲಿ ಫೋನಿನಲ್ಲಿ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾಳೆ, ಪರಾರಿಯಾಗಲು ಹೋಗಿ ಆಕೆ ಸಿಕ್ಕಿಬಿದ್ದ ಸುಮಾರು ಒಂದು ವರ್ಷದ ನಂತರ ಅವಳು ಫೋನನ್ನು ಸೀಕ್ರೇಟಾಗಿ ಪಡೆದುಕೊಂಡಿದ್ದಳು. ವೀಡಿಯೋದಲ್ಲಿ ಶೇಖ್ ಲತೀಫಾ ಯುನೈಟೆಡ್ ಅರಬ್ ಎಮಿರೇಟ್ಸ್ನ ನಗರದಲ್ಲಿರುವ ವಿಲ್ಲಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ರಾಜಕುಮಾರಿ ಮೊದಲ ಬಾರಿಗೆ 16 ನೇ ವಯಸ್ಸಿನಲ್ಲಿ ಓಡಿಹೋಗಲು ಪ್ರಯತ್ನಿಸಿದ್ದಳು. ದುಬೈನ ಪ್ರತಿಷ್ಟಿತ ಅರಸನ ಮಗಳಾದ ರಾಜಕುಮಾರಿ ಲತೀಫಾ 2018 ರಲ್ಲಿ ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾಗ ಬೋಟ್ ನಲ್ಲಿ ಸಿಕ್ಕಿಬಿದ್ದಳು.
ಇದಕ್ಕೂ ಮೊದಲು ದುಬೈನ ರಾಜಕುಮಾರಿ ತನ್ನ 16 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಳು ಆದರೆ ಆಗಲೂ ಯಶಸ್ವಿಯಾಗಲಿಲ್ಲ. ಲತೀಫಾ ಪ್ರಕಾರ ಆ ಸಮಯದಲ್ಲಿ ಆಕೆಯನ್ನು ಹಿಡಿಯಲಾಯಿತು ಮತ್ತು ಮೂರು ವರ್ಷಗಳ ಕಾಲ ಒಳಗೆ ಹಾಕಲಾಯಿತು. ವೀಡಿಯೊದಲ್ಲಿ ಲತೀಫಾ ತನ್ನ ತಂದೆಯನ್ನು ಮುಖವಾಡ ಕಳಚಿದ್ದಳು. ರಾಜಕುಮಾರಿಯ ತಂದೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನ ಪ್ರಧಾನಿ ಮತ್ತು ಉಪಾಧ್ಯಕ್ಷರಾಗಿದ್ದಾರೆ. ರಾಜಕುಮಾರಿ ಅಲ್ ಮಕ್ತೌಮ್ ಅವರ 30 ಮಕ್ಕಳಲ್ಲಿ ಒಬ್ಬರು.
ಟ್ರೈನರ್ ಸ್ನೇಹಿತೆ ಟೀನಾ, ಲತೀಫಾಗೆ ಎರಡನೇ ಬಾರಿ ತಪ್ಪಿಸಿಕೊಳ್ಳಲು ಸಹಾಯ ಮಾಡಿದರು. ಟೀನಾ 2014 ರಲ್ಲಿ ಲತೀಫಾಗೆ ಬ್ರೆಜಿಲ್ ಮಾರ್ಷಲ್ ಆರ್ಟ್ಸ್ ಕಲಿಸಲು ದುಬೈನ ರಾಯಲ್ ನಿವಾಸಕ್ಕೆ ಹೋಗಿದ್ದಾಳೆ. ಆಕೆಯ ಸಂಪರ್ಕಕ್ಕೆ ಬಂದ ನಂತರ ಲತೀಫಾ ತಪ್ಪಿಸಿಕೊಳ್ಳಲು ಆಕೆಯ ಸಹಾಯವನ್ನು ಕೋರಿದಳು. ಈ ಸಮಯದಲ್ಲಿ ಲತೀಫಾ ಮಾಜಿ ಫ್ರೆಂಚ್ ಪತ್ತೆದಾರಿ ಹರ್ವಿ ಜೊತೆ ಸಂಪರ್ಕದಲ್ಲಿದ್ದರು. ಲತೀಫಾ ತನ್ನ ತರಬೇತುದಾರರೊಂದಿಗೆ ಸಣ್ಣ ರಬ್ಬರ್ ದೋಣಿಯಲ್ಲಿ ಸಮುದ್ರದಲ್ಲಿ ಹೊರಟಳು.
ಅಲೆಗಳನ್ನು ಎದುರಿಸಿ ಅವರಿಬ್ಬರೂ ಹೇಗೋ ಅಂತಾರಾಷ್ಟ್ರೀಯ ಗಡಿಯನ್ನು ತಲುಪುವಲ್ಲಿ ಯಶಸ್ವಿಯಾದರು. ಲತೀಫಾ ದುಬೈ ರಾಜಮನೆತನದ ಪಂಜರದಿಂದ ಅವಳು ಈಗ ಮುಕ್ತಳಾಗಿದ್ದಾಳೆ ಎಂದು ಭಾವಿಸಿದಳು, ಆದರೆ ಅವಳು ತಪ್ಪಾಗಿ ಭಾವಿಸಿದ್ದಳು. ಓಮನ್ ಮೂಲಕ ದುಬೈಯಿಂದ ಹೊರಟಿದ್ದ ರಾಜಕುಮಾರಿ ಲತೀಫಾ ಗೋವಾ ಕರಾವಳಿಯಿಂದ ಕೇವಲ 30 ಮೈಲುಗಳಷ್ಟು ದೂರದಲ್ಲಿ ಸಿಕ್ಕಿಬಿದ್ದಳು.
ಭಾರತೀಯ ನೌಕಾಡೆಯೇ ರಾಜಕುಮಾರಿಯನ್ನು ಹಿಡಿದು ಯುಎಇಗೆ ಕಳುಹಿಸಿತು!
ಬ್ರಿಟಿಷ್ ಪತ್ರಿಕೆ ಗಾರ್ಡಿಯನ್ ಸಾಕ್ಷ್ಯಚಿತ್ರದ ಆಧಾರದ ಮೇಲೆ ತಯಾರಿಸಿದ ವರದಿಯಲ್ಲಿ ಈ ಬೋಟ್ ಭಾರತದ ಕಡೆಗೆ ಚಲಿಸುತ್ತಿತ್ತು. ಭಾರತದಲ್ಲಿ ತಾನು ಸುರಕ್ಷಿತವಾಗಿರುತ್ತೇನೆ ಎಂದು ಲತೀಫಾಗೆ ಅನಿಸಿತು. ಆಕೆ ಭಾರತಕ್ಕೆ ಬಂದ ನಂತರ ಫ್ಲೋರಿಡಾಕ್ಕೆ ಹೋಗಲು ಯೋಜಿಸಿದ್ದಳು. ಲತೀಫಾ ಫ್ಲೋರಿಡಾದಲ್ಲಿ ರಾಜಕೀಯ ಆಶ್ರಯ ಪಡೆಯಲು ಬಯಸಿದ್ದರು. ಆದರೆ ಲತೀಫಾಳನ್ನು ಗೋವಾ ಕರಾವಳಿಗೆ ಕೇವಲ 30 ಮೈಲುಗಳ ಮೊದಲು ಹಿಡಿಯಲಾಯಿತು. ಮಾಧ್ಯಮ ವರದಿಗಳ ಪ್ರಕಾರ, ಭಾರತೀಯ ಕೋಸ್ಟ್ ಗಾರ್ಡ್ ಲತೀಫಾಳನ್ನು ತಮ್ಮೊಂದಿಗೆ ಇರಿಸಿಕೊಂಡಿತ್ತು. ನಂತರ ‘ರಾಜಕುಮಾರಿ’ ಲತೀಫಾಳನ್ನು ಹಸ್ತಾಂತರಿಸಲಾಯಿತು ಎನ್ನಲಾಗಿದೆ.. ಈಗಲೂ ದುಬೈ ರಾಜಕುಮಾರಿ ಗೃಹ ಬಂಧನದಲ್ಲಿದ್ದು ಸ್ವತಂತ್ರಕ್ಕಾಗಿ ಮೊರೆ ಇಡುತ್ತಲೇ ಇದ್ದಾಳೆ.
ವರದಿ- ವಾಸುದೇವ್ ಮಾರ್ನಾಡ್