ಅಮೆರಿಕ: ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟ್ವಿಟರ್ ತನ್ನ ಪ್ಲಾಟ್ ಫಾರ್ಮ್ನಲ್ಲಿ ಚಂದಾದಾರಿಕೆ ಸೇವೆಯನ್ನು ಆರಂಭಿಸಲು ನಿರ್ಧರಿಸಿದೆ. ವಿವಿಧ ಮೂಲಗಳಿಂದ ಆದಾಯ ಗಳಿಕೆಯ ಮಾದರಿಯ ಭಾಗವಾಗಿ ಟ್ವಿಟರ್ ಈ ಯೋಜನೆ ರೂಪಿಸಿದೆ.
ಇದರಲ್ಲಿ ಬಳಕೆದಾರರು ಹೈಪ್ರೊಫೈಲ್ ಖಾತೆಗಳ ವಿಶೇಷ ಕಂಟೆಂಟ್ಗಳಿಗೆ ಪಾವತಿ ಮಾಡಬೇಕಾಗುತ್ತದೆ.
ವಿಶ್ವಮಟ್ಟದಲ್ಲಿ ಜನಪ್ರಿಯವಾಗಿರುವ ಸಾಮಾಜಿಕ ಮಾಧ್ಯಮ ಟ್ವಿಟರ್, ತನ್ನ ವಾರ್ಷಿಕ ಹೂಡಿಕೆದಾರರ ಸಭೆಯಲ್ಲಿ ಸಂಭಾವ್ಯ ಹೊಸ ಸೇವೆಗಳನ್ನು ಘೋಷಿಸಿದ್ದು, ಇದು ಸದ್ಯ ಇರುವ ಜಾಹೀರಾತನ್ನು ಮೀರಿ ಹೊಸ ಆದಾಯದ ಮೂಲಗಳನ್ನು ಹುಡುಕುತ್ತದೆ.
ಸೂಪರ್ ಫಾಲೋಗಳಂತಹ ಯೋಜನೆಗಳು ಬಳಕೆದಾರರಿಂದ ಹಣ ಪಡೆಯುವ ಅವಕಾಶಗಳನ್ನು ಎಕ್ಸ್ಪ್ಲೋರ್ ಮಾಡುವುದರಿಂದ ಕಂಟೆಂಟ್ ಸೃಷ್ಟಿಕರ್ತರು ಮತ್ತು ಪ್ರಕಾಶಕರಿಗೆ ಅವರ ಪ್ರೇಕ್ಷಕರು ನೇರವಾಗಿ ಬೆಂಬಲಿಸಲು ಅವಕಾಶ ನೀಡುತ್ತದೆ. ಈ ಮೂಲಕ ಬಳಕೆದಾರರು ಇಷ್ಟಪಡುವ ಕಂಟೆಂಟ್ ರಚನೆ ಮುಂದುವರಿಸಲು ಅವರನ್ನು ಪ್ರೋತ್ಸಾಹಿಸುತ್ತದೆ. ನಾವು ನಮ್ಮ ಸೇವೆಗೆ ನೀಡುತ್ತಿರುವ ಇನ್ಸೆಂಟಿವ್ಸ್ಗಳನ್ನು ಮರುಪರಿಶೀಲಿಸುತ್ತಿದ್ದೇವೆ ಮತ್ತು ಪುನರ್ವಿಮರ್ಶಿಸುತ್ತಿದ್ದೇವೆ. ಟ್ವಿಟರ್ನಲ್ಲಿ ಜನರು ಪಾಲ್ಗೊಳ್ಳುವಿಕೆ ಆಧರಿಸಿ ನಮ್ಮ ಉತ್ಪನ್ನದ ವೈಶಿಷ್ಟ್ಯಗಳು ಪ್ರೋತ್ಸಾಹಿಸಲ್ಪಡುತ್ತವೆ ಎಂದು ಟ್ವಿಟರ್ ವಕ್ತಾರರು ಎಎಫ್ಪಿಗೆ ತಿಳಿಸಿದ್ದಾರೆ.