ಅಮೆರಿಕ, ವಾಷಿಂಗ್ಟನ್: ದೇಶಾದ್ಯಂತ 9.69 ಲಕ್ಷ ಮಂದಿ ಸಾವಿಗೆ ಕಾರಣವಾಗಿರುವ ಕೋವಿಡ್-19 ಅನ್ನು ಕೊರೊನಾ ವೈರಸ್ ಅಲ್ಲ, ಚೀನಾ ವೈರಸ್ ಎಂದೇ ಕರೆಯಬೇಕು. ಕೊರೊನಾ ಎಂಬ ಶಬ್ಧವು ಇಟಲಿಯ ಸುಂದರವಾದ ಸ್ಥಳ ಹೆಸರಿನಂತೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಕಲ್ಲಿ ಮಾತನಾಡಿದ ಅವರು, ನಾನು ಮತ್ತೆ ಅಮೆರಿಕದ ಅಧ್ಯಕ್ಷನಾಗಿ ಆಯ್ಕೆಯಾದರೆ, ಅಮೆರಿಕವನ್ನು ಉತ್ಪಾದನಾ ಕ್ಷೇತ್ರದಲ್ಲಿ ಮಹಾಶಕ್ತಿಯನ್ನಾಗಿ ಬೆಳೆಸುತ್ತೇನೆ. ಆ ಮೂಲಕ ಚೀನಾದ ಮೇಲೆ ನಮ್ಮ ದೇಶ ಅವಲಂಬಿತವಾಗುವ ಅಗತ್ಯವಿರುವುದಿಲ್ಲ ಎಂದು ಭರವಸೆಯ ಮಾತುಗಳನ್ನಾಡಿದರು.
ಮಹಾಮಾರಿ ಕೋವಿಡ್19 ಹರಡುವುದಕ್ಕೂ ಮುಂಚೆ ದೇಶದ ಆರ್ಥಿಕ ಪ್ರಗತಿ ಉತ್ತಮವಾಗಿತ್ತು. ಈ ವೈರಸ್ ಹರಡಲು ಚೀನಾವೇ ಕಾರಣ. ಇದು ಕೊರೊನಾ ವೈರಸ್ ಅಲ್ಲ, ಚೀನಾ ವೈರಸ್ ಎಂದು ಡೊನಾಲ್ಡ್ ಡ್ರಂಪ್ ಅವರು ಕಿಡಿಕಾರಿದ್ದಾರೆ.
ನಾನು ಐತಿಹಾಸಿಕವಾಗಿ ಘೋಷಣೆ ಮಾಡುತ್ತೇನೆ ಚೀನಾ ವೈರಸ್ ವಿರುದ್ಧದ ನಮ್ಮ ಯುದ್ಧದಲ್ಲಿ ದೇಶದ ಅಸಂಖ್ಯಾತ ಜೀವಗಳನ್ನು ಉಳಿಸಿದಾಗ ನನಗೆ ಸಂತೋಷವಾಗುತ್ತದೆ ಎಂದು ಡೊನೊಲ್ಡ್ ಡ್ರಂಪ್ ಆಗಸ್ಟ್ನಲ್ಲಿ ನಡೆದ ರಿಪಬ್ಲಿಕನ್ ಪಾರ್ಟಿಯ ರಾಷ್ಟ್ರೀಯ ಸಮಾವೇಶದಲ್ಲಿ ಹೇಳಿದ್ದರು.