Wednesday, May 18, 2022

ಕೋವಿಡ್​ 19ನಿಂದ ಮೃತಪಟ್ಟ ಐದು ಲಕ್ಷ ಮಂದಿಗೆ ಇಂದು ಅಮೆರಿಕ ಅಧ್ಯಕ್ಷ ಜೋ ಬೈಡನ್​ ಗೌರವ ನಮನ

Must read

ವಾಷಿಂಗ್ಟನ್: ಮಹಾಮಾರಿ ಕೋವಿಡ್​ 19 ವೈರಸ್​​ ಸೋಂಕಿನಿಂದ ಐದು ಲಕ್ಷ ಮಂದಿ ಸಾವನ್ನಪ್ಪಿರುವ ಹಿನ್ನೆಲೆ ಅವರ ಸ್ಮರಣಾರ್ಥ ಅಮೆರಿಕದ ಶ್ವೇತಭವನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಜ್ಯೋತಿ ಬೆಳಗಿಸಿ, ಮೌನ ಆಚರಣೆಯ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಬೈಡನ್ ಅವರೊಂದಿಗೆ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್, ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಮತ್ತು ಅವರ ಪತಿ ಡೌಗ್‌ ಎಂಮ್ಹಾಪ್‌ ಅವರು ಭಾಗವಹಿಸುತ್ತಿದ್ದಾರೆ.

ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಒಂದು ತಿಂಗಳ ಬಳಿಕ ಪ್ರಥಮ ಬಾರಿಗೆ ‘ಕೋವಿಡ್‌ 19’ ಸಂಬಂಧಿ ಕಾರ್ಯಕ್ರಮದಲ್ಲಿ ಜೋ ಬೈಡನ್ ಪಾಲ್ಗೊಳ್ಳುತ್ತಿದ್ದಾರೆ.

Latest article