ಕೊರೊನಾಗೆ ಸದ್ಯ ವ್ಯಾಕ್ಸಿನೇಷನ್ ಒಂದೇ ದಾರಿ. ಲಸಿಕೆ ತೆಗದುಕೊಂಡರೆ ಕೊರೊನಾ ಪ್ರಭಾವ ಕಡಿಮೆಯಾಗಬಹುದು. ಹೀಗಾಗಿ, ವ್ಯಾಕ್ಸಿನೇಷನ್ ಸಂಖ್ಯೆ ಹೆಚ್ಚಿಸಲು ಬಹುತೇಕ ಎಲ್ಲಾ ದೇಶಗಳಲ್ಲಿ ತಮ್ಮದೆಯಾದ ನಿಯಮಗಳನ್ನ ರೂಪಿಸಲಾಗಿದೆ. ಲಸಿಕೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳೂ ಕೂಡ ನಡೆಯುತ್ತಲೇ ಇವೆ. ಆದರೆ, ಲಸಿಕೆ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದ್ರೂ ಕೆಲ ಜನರು ಮಾತ್ರ ಲಸಿಕೆ ಬಗ್ಗೆ ಅನುಮಾನಗಳನ್ನಿಟ್ಟುಕೊಂಡು ಲಸಿಕೆ ಹಾಕಿಸಿಕೊಳ್ಳುತ್ತಿಲ್ಲ. ಹೀಗಾಗಿ, ಕೆಲವು ದೇಶಗಳಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಿವೆ.ಕ
ಇದೇ ರೀತಿ ನೆರೆ ರಾಷ್ಟ್ರ ಪಾಕಿಸ್ತಾನ ಕೂಡ ಲಸಿಕೆ ಅಭಿಯಾನ ನಡೆಸುತ್ತಿದ್ದು, ಲಸಿಕೆ ಹಾಕಿಸಿಕೊಳ್ಳದ ಜನರಿಗೆ ಸರ್ಕಾರ ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ಕೋವಿಡ್ ಲಸಿಕೆ ಹಾಕಿಸಿಕೊಳ್ಳದವರಿಗೆ ಶಾಪಿಂಗ್ ಮಾಲ್, ಹೋಟೆಲ್ ಪ್ರವೇಶ ನಿರ್ಬಂಧಿಸಲಾಗಿದೆ. ಹೋಟೆಲ್ಗಳು, ಮಾಲ್ಗಳು ಹಾಗೂ ಬಸ್ಗಳಲ್ಲಿ ಸೋಂಕು ಅತ್ಯಂತ ವೇಗವಾಗಿ ಹರಡುತ್ತದೆ. ಈ ನಿಟ್ಟಿನಲ್ಲಿ ಅಕ್ಟೋಬರ್ 15ವರೆಗೆ ಶಾಪಿಂಗ್ ಮಾಲ್, ಹೋಟೆಲ್ಗಳಲ್ಲಿ ಲಸಿಕೆ ಹಾಕಿಸಿಕೊಳ್ಳದವರಿಗೆ ಅನುಮತಿಸಲಾವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ಎಚ್ಚರಿಕೆ ನೀಡಿದೆ.
ಕೊರೊನಾದಿಂದಾಗಿ ಎಲ್ಲಾ ರಾಷ್ಟ್ರಗಳ ಆರ್ಥಿಕ ಬೆಳವಣಿಗೆ ಮೇಲೆ ಹೊಡೆತ ಬಿದ್ದಿದೆ. ವಿಶ್ವದ ಶ್ರೀಮಂತ ರಾಷ್ಟ್ರಗಳೂ ಕೂಡ ಕೊರೊನಾ ನಿಯಂತ್ರಣಕ್ಕೆ ತರುವಲ್ಲಿ ವಿಫಲವಾಗಿವೆ. ಪದೇ ಪದೇ ಲಾಕ್ಡೌನ್ ಮಾಡಿದ್ರೆ, ಆರ್ಥಿಕವಾಗಿ ಹೊಡೆತ ಬೀಳಲಿದೆ. ಈ ನಿಟ್ಟಿನಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತರುವ ಪ್ರಯತ್ನಕ್ಕೆ ಮುಂದಾಗಿವೆ. ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ನಡುವೆ ಸೆಪ್ಟೆಂಬರ್ 30ರ ನಂತರ ವಿಮಾನ ಪ್ರಯಾಣಕ್ಕೆ ಕೊರೊನಾ ಲಸಿಕೆಯನ್ನು ಕಡ್ಡಾಯ ಮಾಡಲಾಗಿದೆ.
ವರದಿ-ದಿವ್ಯಾ ರಘುನಾಥ್