ಅಘ್ಘಾನಿಸ್ತಾನದ ಕಾಬೂಲ್ನ ಖಾಜೆ ಬಘ್ರಾದ ಗಲಾಯ್ ಪ್ರದೇಶದಲ್ಲಿ ಮತ್ತೊಂದು ಪ್ರಬಲ ಬಾಂಬ್ ಸ್ಫೋಟವಾಗಿದ್ದು, ಹಲವು ಜನರು ಗಂಭೀರ ಗಾಯಗೊಂಡಿದ್ದಾರೆ.
ಕಾಬೂಲ್ ನಗರದ ಏರ್ಪೋರ್ಟ್ ಬಳಿ ಖಾಜೆ ಬಘ್ರಾದ ಗಲಾಯ್ ಪ್ರದೇಶದಲ್ಲಿ ಮತ್ತೊಂದು ಪ್ರಬಲ ಸ್ಫೋಟವಾಗಿದೆ. ಅಮೆರಿಕ ಅಧ್ಯಕ್ಷ ಜೊ ಬೈಡನ್ ಎಚ್ಚರಿಗೆ ಬೇನ್ನಲ್ಲೇ ಈ ಸ್ಫೋಟ ಸಂಭವಿಸಿದೆ. ಇನ್ನು ಬಾಂಬ್ ಸ್ಫೋಟದ ಹಿಂದೆ ಐಸಿಎಸ್ ಕೈವಾಡ ಶಂಕೆ ವ್ಯಕ್ತವಾಗಿದೆ. ಸ್ಫೋಟದ ತೀವ್ರತೆಗೆ ಸಾಕಷ್ಟು ಜನರಿಗೆ ಗಾಯವಾಗಿದೆ. ಸ್ಫೋಟದಿಂಗಾಗಿ ಕಾಬೂಲ್ ನಗರದಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಸ್ಫೋಟವಾಗುತ್ತಿದ್ದಂತೆ ಖಾಜೆ ಬಘ್ರಾದ ಗಲಾಯ್ ಪ್ರದೇಶದ ಜನರು ಭಯಭೀತರಾಗಿ ಚದುರಿ ಹೋಗಿದ್ದಾರೆ.