ನ್ಯೂಯಾರ್ಕ್: ಅಮೆರಿಕದಲ್ಲಿ ಉಂಟಾಗಿರುವ ಇಡಾ ಚಂಡಮಾರುತ, ದೇಶದ ಈಶಾನ್ಯ ಭಾಗದ 6 ಪ್ರಾಂತ್ಯಗಳಲ್ಲಿ ಅನಾಹುತಕ್ಕೆ ಕಾರಣವಾಗಿದೆ. ಮೇರಿಲ್ಯಾಂಡ್, ಕನೆಕ್ಟಿಕಟ್, ವರ್ಜೀನಿಯಾ, ಲೂಸಿಯಾನಾ, ಮಿಸಿಸಿಪ್ಪಿ, ನ್ಯೂಯಾರ್ಕ್ ಪ್ರಾಂತ್ಯಗಳು ಹೆಚ್ಚು ಹಾನಿಗೊಳಗಾದ ಪ್ರಾಂತ್ಯಗಳಾಗಿವೆ.
ನ್ಯೂಯಾರ್ಕ್ನಲ್ಲಿ 26 ಜನ, ಮೇರಿಲ್ಯಾಂಡ್, ಕನೆಕ್ಟಿಕಟ್ ಮತ್ತು ವರ್ಜೀನಿಯಾದಲ್ಲಿ ತಲಾ ಒಬ್ಬರು ಸಾವನ ಪ್ಪಿದ್ದಾರೆೆ. ಮತ್ತೂಂದೆಡೆ, ನ್ಯೂಯಾರ್ಕ್ ಹಾಗೂ ನ್ಯೂಜೆರ್ಸಿಯಲ್ಲಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುವ ಸಾಧ್ಯತೆಗಳನ್ನು ಮನಗಂಡಿರುವ ಅಮೆರಿಕ ಸರ್ಕಾರ, ಆಯಾ ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ.
ಚಂಡಮಾರುತದ ಪರಿಣಾಮವಾಗಿ, ಲೂಸಿಯಾನಾದಲ್ಲಿ ಜನರ ಜೀವನ ಅಸ್ತವ್ಯಸ್ತವಾಗಿದೆ. ಅಲ್ಲಿ ಒಂದೆರಡು ದಿನಗಳಿಂದ ವಿದ್ಯುತ್ ಇಲ್ಲ, ಕುಡಿಯಲು ಶುದ್ಧ ನೀರೂ ಸಿಗುತ್ತಿಲ್ಲ. ನೀರು ಶುದ್ಧೀಕರಣ ಘಟಕಗಳಿಗೆ ನೀರು ನುಗ್ಗಿದ್ದರಿಂದಾಗಿ ಕುಡಿಯುವ ನೀರಿನ ಸರಬರಾಜು ಕೂಡ ನಿಂತು ಹೋಗಿದೆ ಎನ್ನಲಾಗಿದೆ.