ವಿಶ್ವಸಂಸ್ಥೆ: ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ನಲ್ಲಿ ಹಿಂಸಾಚಾರದಿಂದ ನಲುಗಿರುವ ಹಿನ್ನೆಲೆ ಲಕ್ಷಾಂತರ ಜನರು ಆಹಾರ ಹಾಗೂ ಅಗತ್ಯ ವಸ್ತುಗಳ ಕೊರತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ಯಾಮರೂನ್ ಮೂಲಕ ಆಹಾರ ಮತ್ತು ಅಗತ್ಯ ವಸ್ತುಗಳು ಪೂರೈಕೆ ಮಾಡಲಾಗುತ್ತಿತ್ತು.
ಸದ್ಯ ಈ ಹಾದಿಯನ್ನು ಬಂದ್ ಮಾಡಿರುವುದರಿಂದಾಗಿ ಈ ಪರಿಸ್ಥಿತಿ ಉದ್ಭವಿಸಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
20.3 ಲಕ್ಷ ಜನರು ಆಹಾರ ಸಿಗದೇ ತೊಂದರೆಗೆ ಸಿಲುಕಿದ್ದಾರೆ. ಎರಡು ಲಕ್ಷ ಜನರು ತಮ್ಮ ಮನೆಗಳನ್ನು ಬಿಟ್ಟು ಸುರಕ್ಷಿತ ಸ್ಥಳಗಳನ್ನು ಹುಡುಕಿ ಬೇರೆ ದೇಶಗಳಿಗೂ ವಲಸೆ ಹೋಗಿದ್ದಾರೆ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ದುಜಾರಿಕ್ ತಿಳಿಸಿದ್ದಾರೆ.
ಇನ್ನು 92 ಸಾವಿರ ನಿರಾಶ್ರಿತರು ಪಕ್ಕಾದ ಕಾಂಗೊ ರಾಷ್ಟ್ರವನ್ನು ತಲುಪಿದ್ದಾರೆ. 13,200ಕ್ಕೂ ಹೆಚ್ಚು ನಿರಾಶ್ರಿತರು ಕ್ಯಾಮರೂನ್, ಚಾಡ್ ಮತ್ತು ಕಾಂಗೊ ದಾಟಿದ್ದು, ಸುರಕ್ಷಿತ ಸ್ಥಳ ಅರಸಿ ಮುನ್ನಡೆದಿದ್ದಾರೆ ಎಂದು ಹೇಳಿದ್ದಾರೆ.