Tuesday, May 17, 2022

ಅಮೆರಿಕಾ ಪರ ಕೆಲಸ ಮಾಡುತ್ತಿದ್ದ ಅಫ್ಘಾನಿಸ್ತಾನ್ ಭಾಷಾಂತರಿಗೆ ತಾಲಿಬಾನ್ ನೀಡಿದ ಉಗ್ರಶಿಕ್ಷೆ ಏನು ಗೊತ್ತಾ..?

Must read

ಅಮೆರಿಕ ಸೇನೆ ಅಘ್ಘಾನಿಸ್ತಾನದಿಂದ ತೆರಳುತ್ತಲೇ ಅಘ್ಘಾನ್​ನಲ್ಲಿ ಉಗ್ರರ ಉಪಟಳ ಮುಂದುವರೆದಿದೆ. ಅಮೆರಿಕ ಸೇನೆ ಪರ ಕೆಲಸ ಮಾಡಿದ್ದಾನೆ ಎಂಬ ಸಂಶಯದಿಂದ ಅಫ್ಘಾನಿಸ್ತಾನ್ ಪ್ರಜೆಯೊಬ್ಬನಿಗೆ  ಉಗ್ರ ಶಿಕ್ಷೆಯನ್ನು ತಾಲಿಬಾನಿ​ಗಳು ನೀಡಿದ್ದಾರೆ.

ಅಮೆರಿಕಾದಲ್ಲಿ ಇಷ್ಟು ದಿನ ಬೀಡುಬಿಟ್ಟಿದ್ದ ಅಮೆರಿಕ ಸೇನೆ ಇಂದು ಅಘ್ಘಾನಿಸ್ತಾನದಿಂದ ಹೊರಟು ಹೋಗಿದೆ. ಅಮೆರಿಕ ಸೇನೆ ಅಘ್ಘಾನ್​ನಿಂದ ಹೊರಟು ಹೋಗುತ್ತಿದ್ದಂತೆ ತಾಲಿಬಾನ್​ಗಳ ಅಟ್ಟಹಾಸ ಮುಂದುವರೆದಿದೆ. ಅಮೆರಿಕ ಸೇನೆ ಪರ ಭಾಷಾಂತರಿ ಕೆಲಸ ಮಾಡಿದ ಶಂಕೆಯ ಮೇರೆಗೆ ಅಘ್ಘಾನ್ ಪ್ರಜೆಯನ್ನು ಅಮೆರಿಕದ ಹೆಲಿಕಾಪ್ಟರ್​ಗೆ ನೇಣು ಹಾಕಿ ತಾಲಿಬಾನಿಗಳು ಕೌರ್ಯವನ್ನು ಮೆರೆದಿದ್ದಾರೆ.

ಇನ್ನು ತಾಲಿಬಾನ್​ ಉಗ್ರರು ಆಗಸ್ಟ್​ 31ರ ವರೆಗೆ ಮಾತ್ರ ಅಮೆರಿಕ ಸೇನೆ ಅಘ್ಘಾನಿಸ್ತಾನದಲ್ಲಿ ಇರುವಂತೆ ಡೆಡ್​ಲೈನ್ ನೀಡಿತ್ತು. ಈ ಹಿನ್ನೆಲೆ ಇಂದು ಅಮೆರಿಕ ಸೇನೆ ಅಘ್ಘಾನಿಸ್ತಾನವನ್ನು ತೊರೆದಿದೆ. 

Latest article