ಬೈಕ್ ರೇಸ್ ವೇಳೆ ನಡೆದ ಘಟನೆಯ ದೃಶ್ಯವೊಂದು ನೋಡುಗರ ಎದೆ ಝಲ್ ಎನಿಸುವಂತಿದೆ. ರೇಸ್ನಲ್ಲಿದ್ದ ರೈಡರ್ ಉತ್ಸಾಹದಲ್ಲಿ ಡಿಫರೆಂಟ್ ಸ್ಟಂಟ್ ಮಾಡಲು ಹೋಗಿ ಬಹುದೊಡ್ಡ ಅನಾಹುತವಾಗಿರುವ ಘಟನೆ ಚಿಕಾಗೋದಲ್ಲಿ ನಡೆದಿದೆ.
ಚಿಕಾಗೋದ ಇಲಿನಾಯ್ಸ್ನಲ್ಲಿ ದುಬಾರಿ ಬೈಕ್ಗಳ ರೇಸ್ ನಡೆದಿದ್ದು, ಈ ವೇಳೆ ಒಬ್ಬ ಸವಾರ ಲೆಫ್ಟ್ ಹ್ಯಾಂಡ್ ಡ್ರ್ಯಾಗ್ ವೀಲಿಂಗ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಮತ್ತೊಂದು ಬೈಕ್ ಡಿಕ್ಕಿಯಾಗಿದ್ದು, ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ರೈಡರ್ ಬೈಕ್ ಬಿಟ್ಟು ಓಡಿದ್ದಾರೆ. ಬೈಕ್ ಸವಾರನಿಗೂ ಬೆಂಕಿ ಹೊತ್ತಿಕೊಂಡಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇನ್ನು ರೇಸ್ನಲ್ಲಿದ್ದ ಉಳಿದ ಬೈಕ್ ಸವಾರರೂ ಕೂಡ ಘಟನಾ ಸ್ಥಳದಲ್ಲಿದ್ದು, ನೋಡ ನೋಡುತ್ತಿದ್ದಂತೆ ಅಪಘಾತಕ್ಕೀಡಾದ ಬೈಕ್ ಹೊತ್ತಿ ಉರಿದಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ನೋಡುಗರ ಎದೆಯಲ್ಲಿ ನಡುಕ ಹುಟ್ಟಿಸಿವಂತಿದೆ.