ಇಟಲಿಯ ಮಿಲಾನ್ ನಗರದಲ್ಲಿನ ಬಹುಮಹಡಿಗಳ ಕಟ್ಟಡಕ್ಕೆ ಬೆಂಕಿ ಬಿದ್ದಿದೆ. ನೋಡ ನೋಡುತ್ತಿರುವಂತೆಯೇ ಇಡೀ ಕಟ್ಟಡ ಸಂಪೂರ್ಣ ಬೆಂಕಿ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ.
ಇನ್ನು ಬಹುಮಹಡಿಯ ಕಟ್ಟಡಕ್ಕೆ ಬೆಂಕಿ ಬಿಳುತ್ತಿದ್ದಂತೆ ಅಲ್ಲಿನ ನಿವಾಸಿಗಳು ಅಲ್ಲಿಂದ ಸುರಕ್ಷಿತವಾಗಿ ಕಟ್ಟಡದಿಂದ ಹೊರಗಡೆ ಬಂದಿದ್ದಾರೆ. ಇನ್ನು ಈ ಕಟ್ಟಡ 200 ಅಡಿಗಳಷ್ಟು ಎತ್ತರವಾಗಿದ್ದು 20 ಮಹಡಿವುಳ್ಳದಾಗಿದೆ. ಅದೃಷ್ಟವಶಾತ್ ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲವೆಂದು ವರದಿಯಾಗಿದೆ. ಮಹಡಿಗಳ ಕಟ್ಟಡ ಹೊತ್ತಿ ಉರಿಯಲು ಕಾರಣ ಮಾತ್ರ ಪತ್ತೆಯಾಗಿಲ್ಲ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಫುಲ್ ವೈರಲ್ ಆಗಿದೆ.