Sunday, October 2, 2022

ಈದ್ಗಾ ಮೈದಾನ ಸರ್ಕಾರದ ಆಸ್ತಿ- ಶಾಸಕ ಜಮೀರ್​ ಅಹ್ಮದ್

Must read

ಬೆಂಗಳೂರು: ವಿವಾದಗಳಿಗೆ ತೆರೆ ಬಿದ್ದ ಬಳಿಕ ಇದೀಗ ಮೊದಲ ಬಾರಿಗೆ ಬೆಂಗಳೂರಿನ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲಾಗಿದೆ.

ಧ್ವಜಾರೋಹಣ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಜಮೀರ್​ ಅಹ್ಮದ್​, ಈದ್ಗಾ ಮೈದಾನ ಸರ್ಕಾರದ ಆಸ್ತಿ ಅದರ ಬಗ್ಗೆ ಅವರು ಮಾತನಾಡಬೇಕು ಎಂದಿದ್ದಾರೆ.

ಇನ್ನು ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಮಾಡಿರುವುದು ಖುಷಿ ತಂದಿದೆ. ಎರಡು ವರ್ಷಗಳ ಹಿಂದೆ ಹೇಳಿದ್ದೆ, ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಮಾಡುತ್ತೇವೆ ಎಂದು. ಇದೀಗ ನನಗೆ ಸಂತೋಷ ತಂದಿದೆ. ಈ ಮೈದಾನದಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜೋತ್ಸವಕ್ಕೆ ಅವಕಾಶವಿದೆ ಎಂದರು.

Latest article