ದಾವಣಗೆರೆ: ಜನ ಸಾಗರ ನೋಡಿದರೆ ನಂಬಲು ಸಾಧ್ಯವಾಗುತ್ತಿಲ್ಲ. ರಾತ್ರಿ ಹುಬ್ಬಳ್ಳಿಗೆ ಬರುವಾಗ ಜನಸಾಗರ ತುಂಬಿದ್ದರು. ನಾವು ನಿರೀಕ್ಷಿಸಿದಕ್ಕಿಂತ ಹತ್ತು ಪಟ್ಟು ಜನ ಇಂದು ಸೇರಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖುಷಿ ಹಂಚಿಕೊಂಡಿದ್ದಾರೆ.
ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿನ್ನೆ ರಾತ್ರಿ ಒಂದು ಡಾಬಾದಲ್ಲಿನ ಜನರನ್ನು ಮಾತನಾಡಿಸಿದೆ. ಆಗ ಅಭಿಮಾನಿಗಳು ಇಲ್ಲಿ ಊಟ ಇಲ್ಲಾ ಸರ್ ಆದ್ರೆ ಸಿದ್ದರಾಮಯ್ಯ ಅವರಿಗೋಸ್ಕರ ಒಂದು ದಿನ ಉಪವಾಸ ಇರುತ್ತೇವೆ ಎಂದರು. ಆರರಿಂದ ಏಳು ಲಕ್ಷ ಜನ ಸೇರುವ ನಿರೀಕ್ಷೆ ಇತ್ತು. ಆದರೆ ರಾಜ್ಯದಲ್ಲಿ ಅಲ್ಲಾ, ದೇಶದಲ್ಲಿ ಯಾರ ಸಮಾವೇಶಕ್ಕೂ ಸೇರದಷ್ಟು ಜನ ಸಿದ್ದರಾಮಯ್ಯ ಅವರಿಗಾಗಿ ಸೇರಿದ್ದಾರೆ ಎಂದು ಸಂತಸಪಟ್ಟರು.
ಇನ್ನು ಇಂದು ಸಿದ್ದರಾಮಯ್ಯ ಅವರಿಗೆ ನೀವು ತೋರಿಸಿರುವ ಪ್ರೀತಿ ನೋಡಿದರೆ ದೇಶದ ಯಾವ ನಾಯಕನಿಗೂ ಇಂತಹ ಪ್ರೀತಿ ಸಿಕ್ಕಿಲ್ಲ ಎನಿಸುತ್ತದೆ. 2023ರ ಚುನಾವಣೆಯಲ್ಲಿ ನೀವು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಬೇಕು. ಸಿದ್ದರಾಮಯ್ಯ ಅವರು ಚೆನ್ನಾಗಿರಲಿ ಎಂದು ನೀವೆಲ್ಲಾ ಹಾರೈಸಬೇಕು ಎಂದು ಮನವಿ ಮಾಡಿದ್ದಾರೆ.