Tuesday, October 26, 2021

ಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಇಳಿಸಿ ಕೆಲಸ ಮಾಡಿಸಿದರೆ ಮಾನವ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲವೇ..?

Must read

ಮಾನವ ಹಕ್ಕುಗಳು ಹಾಗೂ ಅವುಗಳ ಉಲ್ಲಂಘನೆಯನ್ನು ಕೆಲವರು ತಮಗೆ ಅನುಕೂಲಕ್ಕೆ ತಕ್ಕಂತೆ ವಾಖ್ಯಾನಿಸುತ್ತಾರೆ. ಈ ಮೂಲಕ ದೇಶದ ಘನತೆಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಟೀಕಿಸಿದ್ದಾರೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) 28ನೇ ಸಂಸ್ಥಾಪನಾ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿರುವ ಅವರು. ಇದರಲ್ಲಿ ತಮಗೆ ರಾಜಕೀಯವಾಗಿ ಎಷ್ಟು ಲಾಭ ನಷ್ಟವಾಗುತ್ತದೆ ಎಂಬ ಲೆಕ್ಕಚಾರವೂ ಇರುತ್ತದೆ. ಇಂಥ ವರ್ತನೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ ಎಂದು ಅವರು ಹೇಳಿದರು. ‘ಮಾನವ ಹಕ್ಕುಗಳ ಉಲ್ಲಂಘನೆ ಹೆಸರಿನಲ್ಲಿ ದೇಶದ ಘನತೆಗೆ ಧಕ್ಕೆ ತರಲು ಯತ್ನಿಸುವವರ ಬಗ್ಗೆ ಜನರು ಎಚ್ಚರದಿಂದ ಇರಬೇಕು’. ಬಡವರಿಗೆ ಶೌಚಾಲಯ, ಅಡುಗೆ ಅನಿಲ ಸಿಲಿಂಡರ್‌ಗಳು, ವಿದ್ಯುತ್‌ ಹಾಗೂ ಮನೆಗಳು ಸೇರಿದಂತೆ ಹಲವಾರು ಮೂಲಸೌಲಭ್ಯಗಳನ್ನು ಕೇಂದ್ರ ಸರ್ಕಾರ ನೀಡಿದೆ. ಇಂಥ ಕ್ರಮಗಳಿಂದಾಗಿ ತಮ್ಮ ಹಕ್ಕುಗಳ ಬಗ್ಗೆ ಅವರಲ್ಲಿ ಹೆಚ್ಚು ಜಾಗೃತಿ ಮೂಡಿದೆ’ ಎಂದು ಹೇಳಿದ್ದಾರೆ.

ಇಲ್ಲಿ ಮಾನವ ಹಕ್ಕುಗಳ ವ್ಯಾಖ್ಯಾನ ಹೀಗೂ ಇರುತ್ತದೆಯೇ..? ಪ್ರಧಾನಿ ನರೇಂದ್ರ ಮೋದಿಯವರ ಪ್ರಕಾರ ಮಾನವ ಹಕ್ಕುಗಳಿಂದ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ ನಡೆಯುತ್ತದೆಯೇ..? ಏಕೆಂದರೆ ಮಾನವ ಹಕ್ಕುಗಳು ನೈತಿಕ ವ್ಯವಹಾರದ ನಡುವಳಿಕೆ, ಜೀತ ಪದ್ದತಿ, ಇನ್ನೀತರ ಅಮಾನವೀಯ, ಖಂಡನೀಯ ಆಚರಣೆ ನಡುವಳಿಕೆಗಳಿಗೆ ಆಹುತಿಯಾಗದಂತೆ ಪ್ರಜೆಗಳನ್ನು ರಕ್ಷಿಸುವ ಕೆಲಸ ಮಾಡುತ್ತದೆ. ದೇಶದ ಸಂವೀಧಾನದ ಅನ್ವಯ ಪ್ರತಿಯೊಬ್ಬ ಪ್ರಜೆಯ ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು, ಸಂವಿಧಾನಾತ್ಮಕ ಪರಿಹಾರಗಳ ಹಕ್ಕು ಇವೆಲ್ಲದರ ರಕ್ಷಣೆಯಾಗಿದೆ ಆದರೆ ಇದೇ ಅಕ್ಟೋಬರ್​ 11 ರಂದು ಶಿವಾಜಿನಗರ ಉಪನೋಂದಣಾಧಿಕಾರಿ ಕಚೇರಿ ಬಳಿ ಮ್ಯಾನ್‌ಹೋಲ್‌ಗೆ ಸೋಮವಾರ ಕಾರ್ಮಿಕರು ಇಳಿದು ಸ್ವಚ್ಛಗೊಳಿಸುತ್ತಿದ್ದರು. ಅದನ್ನು ಗಮನಿಸಿದ ಸಾಮಾಜಿಕ ಕಾರ್ಯಕರ್ತರಾದ ಸ್ವಾತಿ ಶಿವಾನಂದ ಮತ್ತು ವಿನಯ ಕೆ. ಶ್ರೀನಿವಾಸ್ ರವರು ಪ್ರಶ್ನೆ ಮಾಡಿ ಘಟನೆಯನ್ನು ಬೆಳಕಿಗೆ ತಂದರು. ನಿಜವಾದ ಮಾನವ ಹಕ್ಕುಗಳು ಹನನವಾಗುತ್ತಿರುವುದು ಇಲ್ಲಿಯೇ ಅಲ್ಲವೇ..?

Also read:  ಸಿದ್ದರಾಮಯ್ಯ ಅವರ ಆ ಒಂದು ಕರೆಯಿಂದ ಎಚ್ಚೆತ್ತುಕೊಂಡಿತಾ ಬಿಜೆಪಿ ಸರ್ಕಾರ..?

ಕಳೆದ ವರ್ಷದ ಡೇಟಾ ಪ್ರಕಾರ ಭಾರತದಲ್ಲಿ 600 ಕ್ಕೂ ಹೆಚ್ಚು ಸ್ವಚ್ಛತಾ ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ. ಇಂತಹ ಮ್ಯಾನ್‌ಹೋಲ್‌ಗಳಲ್ಲಿ ಇಳಿದು ನೂರಾರು ಕಾರ್ಮಿಕರು ಪ್ರತಿವರ್ಷ ಜೀವ ಕಳೆದುಕೊಳ್ಳುತ್ತಲೇ ಇರುತ್ತಾರೆ. ದುರಾದೃಷ್ಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊರೊನ ಸಂದರ್ಭದಲ್ಲಿ ಎಷ್ಟುಜನ ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿಯೂ ಇಲ್ಲ ಎಂದು ಕೈ ತೊಳೆದುಕೊಂಡು ಬಿಟ್ಟಿತ್ತು.

More articles

Latest article