Wednesday, June 29, 2022

ಡಿಸೆಂಬರ್​ನಲ್ಲಿ ಪಕ್ಷದ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ- ಜೆಡಿಎಸ್​ ವಿರುದ್ಧ ಎಸ್​.ಆರ್​ ಶ್ರೀನಿವಾಸ್​ ಕಿಡಿ

Must read

ತುಮಕೂರು: ನಾನು ಸಚಿವ ಆಗಿದ್ದು ನನ್ನ ಜೀವನದಲ್ಲಿ ಅದೊಂದು ಕೆಟ್ಟ ಕನಸು. ಅದನ್ನು ಮರೆಯಲು ಪ್ರಯತ್ನ ಮಾಡುತ್ತಿದ್ದೇನೆ ಎಂದು ಜೆಡಿಎಸ್​ ಶಾಸಕ ಎಸ್​.ಆರ್​ ಶ್ರೀನಿವಾಸ್​ ಜೆಡಿಎಸ್​ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಆಗಿದ್ದು, ನನ್ನ ಜೀವನದಲ್ಲಿ ಕೆಟ್ಟ ಕನಸು ಮರೆಯುವುದಕ್ಕೆ ಪ್ರಯತ್ನ ಪಡುತ್ತಿದ್ದೇನೆ. ಇಂತವರ ಸಂಪುಟದಲ್ಲಿ ಇದ್ದೇ ಎಂಬುದೇ ದೊಡ್ಡ ಅಪಮಾನ ಎಂದುಕೊಳ್ಳುತ್ತೇನೆ. ಅದನ್ನು ಜ್ಞಾಪಿಸಿಕೊಳ್ಳಲು ಇಷ್ಟ ಪಡಲ್ಲ ಎಂದರು.

ಇನ್ನು ಡಿಸೆಂಬರ್​ವರೆಗೂ ಕಾಯುತ್ತೇನೆ, ಡಿಸೆಂಬರ್​ನಲ್ಲಿ ಪಕ್ಷದ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ರಾಜೀನಾಮೆ ಕೊಟ್ಟು ಬಳಿಕ ಕಾರ್ಯಕರ್ತರ ಬಳಿ ಹೋಗಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ನನ್ನ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇದ್ಯಾ. ಸ್ವಲ್ಪ ಅವರಿಗೆ ಮನಸಾಕ್ಷಿ ಇದ್ದರೆ ನನ್ನವೋಟ್‌ ಕೇಳಬಾರದು. ನನ್ನ ಬಳಿ ವಿಚಲಿರಾಗುವ ಕಾರ್ಯಕರ್ತರು ಇಲ್ಲ. ನಾನು ಸ್ವತಂತ್ರವಾಗಿ ಸ್ಪರ್ಧಿಸಿದಾಗ ಯಾವ ಕಾರ್ಯಕರ್ತರು ಇದ್ದರೂ ಅವರು ಇಂದು ಕೂಡ ನನ್ನ ಜೊತೆಗಿದ್ದಾರೆ. ಕಾರ್ಯಕರ್ತರು ನನ್ನ ಬಿಟ್ಟು ಹೋಗಲ್ಲ ಎನ್ನುವ ನಂಬಿಕೆ ಇದೆ ಎನ್ನುವ ಭರವಸೆ ವ್ಯಕ್ತಪಡಿಸಿದರು.

Latest article