Tuesday, October 26, 2021

ರಾತ್ರಿ ಎಲ್ಲಾ ನಿದ್ರೆ ಬಿಟ್ಟರಂತೆ ಶಾರೂಖ್ ದಂಪತಿ..! ಸೆಲೆಬ್ರಿಟಿಗಳಿಗೆ ಮಕ್ಕಳನ್ನ ಹೆರುವ ಅಧಿಕಾರವೂ ಇಲ್ವಾ..?

Must read

ಡ್ರಗ್ಸ್ ಪ್ರಕರಣ ಸಂಬಂಧ ಜೈಲುವಾಸಿಯಾಗಿರುವ ಆರ್ಯನ್ ಖಾನ್ ಆರೋಗ್ಯದ ಬಗ್ಗೆ ಎನ್‍ಸಿಬಿ ಅಧಿಕಾರಿಗಳ ಬಳಿ ವಿಚಾರಿಸುತ್ತಾ ಕಿಂಗ್ ಖಾನ್ ದಂಪತಿ ರಾತ್ರಿಯಿಡೀ ನಿದ್ದೆಗೆಟ್ಟು ಕುಳಿತಿದ್ದಾರಂತೆ. ಇದು ಬಹುದೊಡ್ಡ ಸುದ್ದಿ..!

ಯಾಕೆ ಸಲೆಬ್ರಿಟಿಗಳಿಗೆ ಮಕ್ಕಳನ್ನ ಹಡಿಯುವ ಅಧಿಕಾರ ಇಲ್ವಾ..? ಹೌದು, ಆರ್ಯನ್ ಜೈಲು ಸೇರಿದಾಗಿನಿಂದ ತಂದೆ ಶಾರೂಖ್, ತಾಯಿ ಗೌರಿ ಖಾನ್​ ಮನಸ್ಸಲ್ಲಿ ತಳಮಳ ಸಹಜವೇ ಅವರೂಮನುಷ್ಯರೇ ಅಲ್ಲವೇ..? ಮಗ ಜೈಲಿನಲ್ಲಿ ಹೇಗೆ ದಿನಗಳನ್ನು ಕಳೆಯುತ್ತಿದ್ದಾನೋ ಎಂಬ ಚಿಂತೆ ಆರ್ಯನ್ ಪೋಷಕರಿಗೆ ಸಹಜವಾಗಿಯೇ ಇರುತ್ತೆ. ಹೀಗಾಗಿ ದಂಪತಿ ಮಗನ ಬಗ್ಗೆ ಯೋಚನೆ ಮಾಡುತ್ತಾ ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆಯುವುದು, ಅಪ್ಪ ಅಮ್ಮನ ಒಡಲಲ್ಲಿ ಬದುಕುವ ಎಲ್ಲರಿಗೂ ಅರ್ಥವಾಗುವ ಸಂಗತಿ. ಆದ್ರೆ ಅದನ್ನೇ ದೇಶದ ಜ್ವಲಂತ ಸಮಸ್ಯೆ ಎನ್ನುವಂತೆ ಬಿಂಬಿಸುವುದು ಇದೆಯಲ್ವಾ..! ಇದು ವಾಕರಿಕೆ ಹುಟ್ಟಿಸುತ್ತೆ. ಸೆಲೆಬ್ರಿಟಿ ಎಂಬ ಕಾರಣಕ್ಕೆ ಎಲ್ಲವನ್ನೂ ಸುದ್ದಿ ಮಾಡುವ ಭರದಲ್ಲಿ ಅವರಲ್ಲಿರುವ ‘ಮನುಷ್ಯ’ನನ್ನು, ಅಂತಃಕರಣವನ್ನು ಈ ಸಮಾಜ ಮರೆತು ಬಿಡುತ್ತಿರುವುದು ದುರಂತವೇ ಸರಿ..! ಮಗು ಅತ್ತಾಗ ತಂದೆ ಸಹಜವಾಗಿ ಕುಗ್ಗುತ್ತಾನೆ, ತಾಯಿ ಕರುಳು ಒಳಗೊಳಗೇ ಕೊರಗುತ್ತೆ ಅನ್ನೋ ಕನಿಷ್ಟ ಜ್ಞಾನವಿಲ್ಲದವರಂತೆ ಸುದ್ದಿ ಮಾಡುವವರನ್ನು ಏನಂತ ಕರೆಯಬೇಕೋ ಗೊತ್ತಾಗಲ್ಲ.

More articles

Latest article