Tuesday, October 26, 2021

ಶಿಥಿಲಾವಸ್ಥೆಯಲ್ಲಿ ಸರ್ಕಾರಿ ಶಾಲಾ-ಕಾಲೇಜು ಕಟ್ಟಡಗಳು: ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆಗೆ ಹೈಕೋರ್ಟ್​ ಗಡುವು

Must read

ರಾಜ್ಯದಲ್ಲಿ ನೂತನ ಶಿಕ್ಷಣ ನೀತಿ ಜಾರಿಗೆ ಸರ್ಕಾರ ತುದಿಗಾಲಿನಲ್ಲಿ ನಿಂತಿದ್ದರೆ ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯ ಕಟ್ಟಡವೊಂದು ಶಿಥಿಲಾವಸ್ಥೆಯಲ್ಲಿರುವುದು ಬೆಳಕಿಗೆ ಬಂದಿದೆ. ಹೌದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದ 24 ಕೊಠಡಿಗಳಲ್ಲಿ 8 ಕೊಠಡಿಗಳು ಮಾತ್ರ ವಿದ್ಯಾರ್ಥಿಗಳ ಬಳಕೆಯ ಸ್ಥಿತಿಯಲ್ಲಿದ್ದು ಉಳಿದ ಕೊಠಡಿಗಳು ಶಿಥಿಲಾವಸ್ಥೆಯಲ್ಲಿರುವುದರಿಂದ ಬಿಟ್ಟುಬಿಡಲಾಗಿದೆ. ಕಟ್ಟಡ ಯಾವಾಗ ಕುಸಿದು ಬೀಳುತ್ತದೋ ಎಂಬ ಭೀತಿಯಲ್ಲಿಯೇ ಮಕ್ಕಳು ಕುಳಿತುಕೊಂಡು ಪಾಠ ಕೇಳಬೇಕಾದ ಪರಿಸ್ಥಿತಿ ತಲೆದೋರಿದೆ. ಕಟ್ಟಡದ ಕೆಲವು ಕಂಬಗಳು, ಕೊಠಡಿಯ ಮೇಲ್ಛಾವಣಿ ಮತ್ತು ಗೋಡೆಗಳು ಶಿಥಿಲಾವಸ್ಥೆಯಲ್ಲಿದ್ದು ಆಡಳಿತ ಮಂಡಳಿ ದುರಸ್ತಿ ಮಾಡುವ ಬಗ್ಗೆ ಅಧಿಕಾರಿಗಳು ಸರ್ಕಾರ ತಲೆಕೆಡಿಸಿಕೊಂಡೇ ಇಲ್ಲ. ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಕುಳಿತಿದ್ದಾರೆ. ಮತ್ತೊಂದೆಡೆ ನಗರದಲ್ಲಿ ಶಾಲೆ ಬಿಟ್ಟ ಮಕ್ಕಳ ಬಗ್ಗೆ ನಡೆಸುತ್ತಿರುವ ಸಮೀಕ್ಷೆ ಪೂರ್ಣಗೊಳಿಸಲು ಬಿಬಿಎಂಪಿಗೆ ಹೈಕೋರ್ಟ್‌ ಎರಡು ತಿಂಗಳ ಕಾಲಾವಕಾಶ ನೀಡಿದೆ.
ಆರ್ಯನ್​ ಖಾನ್​ನ ಸುದ್ದಿಯಿಂದ ಹೊರ ಬಂದಿದ್ದರೆ ಸ್ವಲ್ಪ ವಾಸ್ತವದತ್ತ ಗಮನ ಹರಿಸೋಣವೇ..?
ಏಕೆಂದರೆ ಇದು ಕೇವಲ ಒಮದೇ ಒಂದು ಸರ್ಕಾರಿ ಶಾಲಾ ಕಾಲೇಜಿನ ಸಮಸ್ಯೆ ಅಲ್ಲ ರಾಜ್ಯಾದ್ಯಂತ ಇಂತಹ ಅನೇಕ ಸರ್ಕಾರಿ ಶಾಲಾ ಕಾಲೇಜುಗಳಿವೆ. ಏಕೆಂದರೆ ಎರಡು ವರ್ಷಗಳಿಂದ ಎಲ್ಲಾ ಶಾಲಾ ಕಾಲೇಜುಗಳ ಬಾಗಿಲು ಮುಚ್ಚಿ ಈಗ ತೆರದುಕೊಂಡಿವೆ. ಹೀಗಾಗಿ ಇಂತಹ ಅನೇಕ ಅಪಾರ ಪ್ರಮಾಣದ ಶಾಲಾ ಕಾಲೇಜುಗಳು ಕಾಣಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಲ್ಲದೆ ನಗರದಲ್ಲಿ ಶಾಲೆ ಬಿಟ್ಟ ಮಕ್ಕಳ ಬಗ್ಗೆ ಸಮೀಕ್ಷೆ ಪೂರ್ಣಗೊಳಿಸಲು ಹೈಕೋರ್ಟ್ ಬಿಬಿಎಂಪಿಗೆ ಎರಡು ತಿಂಗಳ ಕಾಲಾವಕಾಶ ನೀಡಿದೆ. ಈ ಸಮೀಕ್ಷೆ ನಗರದಲ್ಲಿ ಶಾಲೆ ಬಿಟ್ಟಿರುವ ಮಕ್ಕಳ ಸಂಖ್ಯೆ ತಿಳಿಯಲು ಮಾತ್ರವೇ ಅನುಕೂಲಕರವಾಗಲಿದೆ. ಆದರೆ ರಾಜ್ಯಾದ್ಯಂತ ಹಳ್ಳಿ ಪ್ರದೇಶಗಳಲ್ಲಿ ಶಾಲೆ ತೊರೆದಿರುವ ಮಕ್ಕಳ ಸಂಖ್ಯೆ ಎಷ್ಟು..? ಹಳ್ಳಿಗಳಲ್ಲಿ ಕೊರೊನದಿಂದಾಗಿ ಯಾರೂ ಆರ್ಥಿಕ ಸಮಸ್ಯೆಗಳನ್ನು ಎದುರಿಸಲಿಲ್ಲವೇ..? ಮಕ್ಕಳು ಕೂಲಿ ಮಾಡಲು ಹೋಗಿರಲಿಲ್ಲವೇ..? ಹಳ್ಳಿ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಮಕ್ಕಳಿಗೆ ಎಷ್ಟರ ಮಟ್ಟಿಗೆ ಆನ್ಲೈನ್​ ಶಿಕ್ಷಣ ಲಭ್ಯವಾಯಿತು..? ಎಷ್ಟು ಮಕ್ಕಳ ಪರಿವಾರದವರು ಅಂಡ್ರಾಯಿಡ್​ ಮೊಬೈಲ್​ ಹೊಂದಿದ್ದರು..?
ಇದ್ಯಾವುದರ ಪರಿಕಲ್ಪನೆಯೂ ನಮಗಿಲ್ಲ. ಸದ್ಯ ನಮ್ಮ ಮಾಧ್ಯಮಗಳು ಶಾರುಖ್​ ಖಾನ್​ರ ಹಾಳಾಗಿರುವ ಮಗನ ಹಿಂದಿಂದೆ ಓಡುತ್ತಿವೆ. ಆದರೆ ವಾಸ್ತವ ಸುದ್ದಿಗಳು, ವಾಸ್ತವದ ಪರಿಸ್ಥಿತಿಗಳು ಮರೆಯಾಗುತ್ತಿವೆ. ಶಾರುಕ್​ ಪುತ್ರನಿಂದ ದೇಶಕ್ಕೆ ಆಗ ಬೇಕಾಗಿರುವುದೇನೂ ಇಲ್ಲ. ಆದರೆ ಇಂತಹ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳು ನಮ್ಮ ದೇಶದ ಭವಿಷ್ಯವಾಗಬಲ್ಲರು ಅಲ್ಲವೆ.

Also read:  ರಾಜ್ಯ ಹಾಗೂ ಚುನಾವಣಾ ಕ್ಷೇತ್ರದ ಸಮಸ್ಯೆಗಳನ್ನು ಬದಿಗಿರಿಸಿ, ಅಲ್ಪಸಂಖ್ಯಾತ ಓಲೈಕೆಗೆ ಹೆಣಗಾಡುತ್ತಿರುವ ವಿರೋಧ ಪಕ್ಷಗಳು..!

More articles

Latest article