ಬೆಳಗಾವಿ: ಸಿದ್ದರಾಮೋತ್ಸವ ದೀಪಾವಳಿ ಆಫರ್ ಹಾಗೆ ಪಕ್ಷಕ್ಕೆ ಒಂದು ಶಕ್ತಿ ಕೊಟ್ಟಿದೆ, ಇದರಿಂದ ರಾಜ್ಯ ಕಾಂಗ್ರೆಸ್ ಒಗ್ಗಟ್ಟಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮೋತ್ಸವ ಒಂದು ಐತಿಹಾಸಿಕ ಸಮಾವೇಶ. ಇದರಿಂದ ಪಕ್ಷಕ್ಕೆ ಶಕ್ತಿ ಬಂದಿರುವುದರಲ್ಲಿ ಎರಡು ಮಾತಿಲ್ಲ. ನನ್ನ ಪ್ರಕಾರ ಸಿದ್ದರಾಮೋತ್ಸವದಲ್ಲಿ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮನಸಾರೆ ಒಪ್ಪಿಕೊಂಡೇ ಕೈ-ಕೈ ಜೋಡಿಸಿದ್ದಾರೆ ಎಂದರು.
ವೇದಿಕೆಯಲ್ಲಿ ಸತೀಶ್ ಜಾರಕಿಹೊಳಿ ಕರೆದು ರಾಹುಲ್ ಗಾಂಧಿ ಮಾತುಕತೆ ವಿಚಾರವಾಗಿ ಮಾತನಾಡಿದ ಅವರು, ಪಕ್ಷದ ಸಂಘಟನೆ ಹಾಗೂ ಚುನಾವಣೆ ತಯಾರಿ ಹೇಗೆ ಎನ್ನುವುದರ ಬಗ್ಗೆ ಚರ್ಚೆ ಆಗಿದೆ. ಇನ್ನು ಕಾರ್ಯಕ್ರಮಕ್ಕೆ ಬಂದವರು ಶೇಕಡಾ 90ರಷ್ಟು ಜನ ಕಾಂಗ್ರೆಸ್ ಕಾರ್ಯಕರ್ತರು. ಉಳಿದವರು ಬೇರೆ ಪಕ್ಷದವರಿರಬಹುದು ಎಂದಿದ್ದಾರೆ.