Tuesday, November 29, 2022

ಮುಂದಿನ ಚುನಾವಣೆಗೆ ಮಾಜಿ ಸಚಿವ ರೇವಣ್ಣ ಮಾಸ್ಟರ್​ ಪ್ಲಾನ್

Must read

ಮುಂದಿನ ವಿಧಾನಸಭೆ ಚುನಾವಣೆಗೆ ‘ದಳನಾಯಕ’ರು ಈಗಿನಿಂದಲೇ ಮಾಸ್ಟರ್​ ಪ್ಲಾನ್ ರೆಡಿ ಮಾಡಿಕೊಂಡಿದ್ದಾರೆ. ಮುನಿಸಿಕೊಂಡವರನ್ನ ಮತ್ತೆ ಒಲಿಸಿಕೊಳ್ಳಲು ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಮುಂದಾಗಿದ್ದಾರೆ. ಹಾಸನದ ಅರಕಲಗೂಡಿನಲ್ಲಿ ಮಾಜಿ ಸಚಿವ ರೇವಣ್ಣ ಪ್ಲಾನ್ ಮಾಡಿಕೊಂಡಿದ್ದು, ಹಾಲಿ ಶಾಸಕರಿದ್ರೂ ಕೇರ್ ಮಾಡದೆ ಸರ್ವೇಗೆ ತಯಾರಿ ನಡೆಸಿದ್ದಾರೆ.

ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಆಪ್ತನೆಂದು ಕರೆಸಿಕೊಳ್ಳುವ ಪಾಪಣ್ಣಿಯಿಂದ ನೂರಾರು ಹಳ್ಳಿಗಳ್ಳಿ ಸರ್ವೇ ನಡೆಸಲು ತಂತ್ರ ರೂಪಿಸಲಾಗಿದೆ. ಕಾರ್ಯಕರ್ತರ ಬಗ್ಗೆ ತಿಳಿಯಲು ಪಾಪಣ್ಣಿಯನ್ನ ಹಳ್ಳಿ ಹಳ್ಳಿಗೆ ಸರ್ವೇಗೆ ಕಳುಹಿಸಲು ಪ್ಲಾನ್​ ಮಾಡಿಕೊಳ್ಳಲಾಗಿದೆ. ಹಾಲಿ ಜೆಡಿಎಸ್ ಶಾಸಕರು ಪಕ್ಷದ ಮೇಲೆ ಮುನಿಸಿಕೊಂಡಿರುವ ಹಿನ್ನೆಲೆ ಸದ್ದು ಗದ್ದಲವಿಲ್ಲದೆ ಕ್ಷೇತ್ರ ಉಳಿಸಿಕೊಳ್ಳಲು ರೇವಣ್ಣ ಹರಸಾಹಸ ಪಡುತ್ತಿದ್ದಾರೆ.

ಇನ್ನು ಅರಕಲಗೂಡಿನಲ್ಲಿ ಜೆಡಿಎಸ್ ಗೆಲುವು ಸಾಧ್ಯನಾ ಎಂಬ ಪರೀಕ್ಷೆ ಆರಂಭವಾಗಿದ್ದು, ಮೈಸೂರು, ಹುಲಿಕಲ್ಲು, ದೊಡ್ಡಮಗ್ಗೆ, ಸೇರಿದಂತೆ ಹಲವೆಡೆ ಜೆಡಿಎಸ್​ ಸರ್ವೇ ನಡೆಸಲು ಮುಂದಾಗಿದೆ. ಹಾಲಿ ಶಾಸಕ ಎ.ಟಿ.ರಾಮುಸ್ವಾಮಿ ಬಗ್ಗೆ ತಲೆ ಕೆಡೆಸಿಕೊಳ್ಳದ ರೇವಣ್ಣ, ಅವರ ಸ್ಥಾನಕ್ಕೆ ಬೇರೆಯವರನ್ನ ತರಲು ಪ್ಲಾನ್​ ಮಾಡಿಕೊಂಡಿದ್ದಾರೆ.

Latest article