Monday, November 29, 2021

‘ಹರ್ ಘರ್ ದಸ್ತಕ್’ ನೀಡುವ ಬದಲು ಲಸಿಕೆಯ ಉತ್ಪಾದನೆಗೆ ಉತ್ತೇಜನ ನೀಡಿ..!

Must read

ಕೋವಿಡ್ ಲಸಿಕೆಯ ಮೊದಲ ಹಾಗೂ ಎರಡನೇ ಡೋಸ್ ಪಡೆದುಕೊಳ್ಳುವಂತೆ ಜನರನ್ನು ಉತ್ತೇಜಿಸಲು ಅನೇಕ ರಾಜ್ಯಗಳಲ್ಲಿ ‘ಹರ್ ಘರ್ ದಸ್ತಕ್’ ಕಾರ್ಯಕ್ರಮ ನಡೆಯುತ್ತಿದೆ. ಸದ್ಯ ನಮ್ಮ ರಾಜ್ಯದಲ್ಲಿಯೂ  ‘ಹರ್ ಘರ್ ದಸ್ತಕ್’ ಅಭಿಯಾನವನ್ನು ಇದೇ 30ರವರೆಗೆ ಆರೋಗ್ಯ ಇಲಾಖೆ ಹಮ್ಮಿಕೊಂಡಿದೆ.

ಈ ಬಗ್ಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ಅವರು ಸುತ್ತೋಲೆಯನ್ನೂ ಹೊರಡಿಸಿದ್ದಾರೆ. ‘ಹರ್ ಘರ್ ದಸ್ತಕ್’ ಎಂದರೆ ಪ್ರತಿ ಮನೆಗೆ ಭೇಟಿ ಎಂಬ ಶೀರ್ಷಿಕೆಯಡಿ ಈ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ಮನೆಗೆ ಭೇಟಿ ನೀಡಿ ಲಸಿಕೆ ಪಡೆಯುವಂತೆ ಅವರನ್ನು ಉತ್ತೇಜಿಸಲಾಗುತ್ತದೆ. ಈ ಯೋಜನೆ ಏನೋ ಉತ್ತಮವಾಗಿದೆ. ಆದರೆ, ಲಸಿಕೆ ನಡೆಯುತ್ತಿರುವ ವೇಗ ಹೇಗಿದೆ ಎನ್ನುವುದನ್ನು ಗಮನಿಸುವುದೇ ಆದರೆ, ಭಾನುವಾರ 24 ಗಂಟೆಗಳಲ್ಲಿ 30,20,199 ಜನರಿಗೆ ಲಸಿಕೆ ನೀಡಲಾಗಿದೆ. ಅಂದರೆ ನೀವು ಲಸಿಕೆ ನಡೆಯುತ್ತಿರುವ ವೇಗವನ್ನು ಈ ಮೂಲಕ ಊಹಿಸಬಹುದಾಗಿದೆ. ಭಾರತದಲ್ಲಿ ಸಂಪೂರ್ಣವಾಗಿ ಅಂದರೆ ಎರಡು ಡೋಸ್​ ಲಸಿಕೆ ಪೂರೈಸಲು ಇನ್ನೂ ತಿಂಗಳುಗಳೇ ಬೇಕಾಗುತ್ತದೆ. ದೇಶದಲ್ಲಿ ಲಸಿಕೆ ಉತ್ಪಾದನೆಗೆ ಉತ್ತೇಜನ ಏಕೆ ನೀಡಲಾಗುತ್ತಿಲ್ಲ..? ಲಸಿಕೆಗಳ ಕೊರತೆಯೇ ಇರುವಾಗ ಸರ್ಕಾರ ಏಕೆ ತೋರ್ಪಡಿಕೆ ಮಾಡುತ್ತಿದೆ..?

ಜನರನ್ನು ಲಸಿಕೆ ಪಡೆಯುವಂತೆ ಉತ್ತೇಜಿಸುವುದು ಕೂಡ ಮುಖ್ಯವೇ ಆಗಿದೆ. ಆದರೆ, ಲಸಿಕೆಗಳ ಕೊರತೆಯನ್ನು ನೀಗಿಸಲು ಉತ್ತೇಜನ ಯಾರು ನೀಡಬೇಕು..? ಇದೇ ನವೆಂಬರ್​ 10ರಂದು ಹೈದರಾಬಾದ್ ಮೂಲದ ಫಾರ್ಮಾ ಮೇಜರ್ ಭಾರತ್ ಬಯೋಟೆಕ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣ ಎಲ್ಲಾ ಅವರು ಕೊರೊನಾ ವೈರಸ್ ಲಸಿಕೆಯ ಎರಡನೇ ಡೋಸ್ ಪಡೆದ ಆರು ತಿಂಗಳ ನಂತರ ಬೂಸ್ಟರ್ ಡೋಸ್‌ ಪಡೆಯಲು ಸೂಕ್ತ ಸಮಯ ಎಂದು ಹೇಳಿದ್ದಾರೆ. ದೇಶದಲ್ಲಿ ಲಸಿಕೆಯ ವೇಗವೇ ಆಮೆ ಗತಿಯಲ್ಲಿ ಸಾಗುತ್ತಿರುವಾಗ ಬೂಸ್ಟರ್​ ಡೋಸ್​ ಕನಸಿನ ಮಾತಾಗಿದೆ. ಹೀಗಾಗಿ ಸರ್ಕಾರ ಎಲ್ಲದಕ್ಕೂ ಮುಂಚೆ ಲಸಿಕೆ ಉತ್ಪಾದನೆಗೆ ಉತ್ತೇಜನ ನೀಡುವುದು ಅತ್ಯವಶ್ಯವಾಗಿದೆ.

Latest article