Tuesday, August 16, 2022

ಬಿಜೆಪಿಯವರೇ ನಿಮಗೆ ಮಾನ, ಮರ್ಯಾದೆ ಇಲ್ವಾ..?- ಪ್ರಮೋದ್​ ಮುತಾಲಿಕ್​ ಕಿಡಿ

Must read

ಧಾರವಾಡ: ಬಿಜೆಪಿಯವರು ಕೋಟಿಗಟ್ಟಲೇ ಧ್ವಜ ಹಾರಿಸಬೇಕು ಎಂಬ ಅಭಿಯಾನ ಮಾಡಿದ್ದಾರೆ‌. ಆದರೆ ಪೂರ್ವ ಸಿದ್ಧತೆಯೇ ಇಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಹೇಳಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾದಿ ಬಟ್ಟೆ ಬಿಟ್ಟು ಈ ಪಾಲಿಸ್ಟರ್ ಬಟ್ಟೆಗೆ ಅನುಮತಿ ಕೊಟ್ಟಿದೆ. ಪಾಲಿಸ್ಟರ್ ಧ್ವಜ ಹರಿದಿದೆ, ಹರಿದ ಧ್ವಜ ಹಾರಿಸಬೇಕಾ..? ಬಿಜೆಪಿಯವರೇ ನಿಮಗೆ ಮಾನ, ಮರ್ಯಾದೆ ಇಲ್ವಾ..? ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಇನ್ನು ಹರಿದ ಪಾಲಿಸ್ಟರ್ ಧ್ವಜಗಳು ಮಾರಾಟವಾಗುತ್ತಿವೆ. ಆ ಧ್ವಜಕ್ಕೆ ಅಳತೆ ಇಲ್ಲ. ಅಶೋಕ ಚಕ್ರ ಕೂಡ ಕ್ರಾಸ್ ಇದೆ. ಮಧ್ಯದಲ್ಲಿ ಇಲ್ಲ. ಮೊಟ್ಟೆ ಆಕಾರದಲ್ಲಿ ಅಶೋಕ ಚಕ್ರವಿದೆ. ರಾಷ್ಟ್ರಧ್ವಜ ಎಂದರೆ ನಿಮಗೆ ಗೌರವ ಇಲ್ಲ. ಆದರೆ ನಾವು ಮಾತ್ರ ಖಾದಿ ಬಟ್ಟೆಯ ಧ್ವಜವನ್ನೇ ಹಾರಿಸುತ್ತೇವೆ ಎಂದಿದ್ದಾರೆ.

Latest article