ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆಗೆ ಅಲ್ಪವಿರಾಮ ಇಡಲಾಗಿದೆ. ಇಂದು ಮತ್ತು ನಾಳೆ ಭಾರತ್ ಜೋಡೋ ಪಾದಯಾತ್ರೆಗೆ ಬ್ರೇಕ್ ಬಿದ್ದಿದೆ. ನಾಡಹಬ್ಬ ಮೈಸೂರು ದಸರಾ ಹಿನ್ನೆಲೆ ಪಾದಯಾತ್ರೆ ಬ್ರೇಕ್ ಬಿದ್ದಿದೆ. ಜಂಬೂ ಸವಾರಿ ಹಿನ್ನೆಲೆ ಮೈಸೂರಿನಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿರುವುದರಿಂದ ಪೊಲೀಸರ ಅಲಭ್ಯತೆಯಿಂದ ರಾಹುಲ್ ಭದ್ರತೆ ಸಾಧ್ಯವಿಲ್ಲ. ಹೀಗಾಗಿ ಎರಡು ದಿನಗಳ ಕಾಲ ಭಾರತ್ ಜೋಡೋ ಯಾತ್ರೆಗೆ ಬ್ರೇಕ್ ಬಿದ್ದಿದೆ.
ಇದನ್ನೇ ಅಸ್ತ್ರವನ್ನಾಗಿಸಿಕೊಂಡ ಕಾಂಗ್ರೆಸ್ ನಾಯಕರು, ಪಾದಯಾತ್ರೆ ಬ್ರೇಕ್ ವೇಳೆಯೇ ಮಹತ್ವದ ಸಭೆ ನಡೆಸಿ ಹಲವಾರು ವಿಚಾರಗಳ ಬಗ್ಗೆ ಚರ್ಚೆಯಲ್ಲಿ ತೊಡಗಿದ್ದಾರೆ. ರಾಹುಲ್ ಗಾಂಧಿ ಪಾದಯಾತ್ರೆಗೆ ಎರಡು ದಿನ ಬ್ರೇಕ್ ಹಿನ್ನೆಲೆ ಎರಡು ದಿನ ಕಬಿನಿಯಲ್ಲಿ ರಾಹುಲ್ ಗಾಂಧಿ ಸೋನಿಯಾ ಗಾಂಧಿ ಜೊತೆ ರಾಹುಲ್ ಗಾಂಧಿ ವಾಸ್ತವ್ಯ ಹೂಡಿದ್ದಾರೆ. ಇನ್ನು ಸೋನಿಯಾ, ರಾಹುಲ್ಗೆ ರಾಜ್ಯ ‘ಕೈ’ ನಾಯಕರು ಸಾಥ್ ನೀಡಿದ್ದು, ಮಹತ್ವದ ಸಭೆಯಲ್ಲಿ ಚರ್ಚೆಗಳನ್ನ ಮಾಡುತ್ತಿದ್ದಾರೆ.
ರೆಸಾರ್ಟ್ನಲ್ಲೇ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯ ಯಶಸ್ವಿ ಬಗ್ಗೆ ಗಂಭೀರ ಚರ್ಚೆಯಲ್ಲಿ ತೊಡಗಿದ್ದಾರೆ. ಅಲ್ಲದೇ ವಿಧಾನಸಭೆ ಚುನಾವಣೆಯ ಸಿದ್ಧತೆ, ಬಿಜೆಪಿ ಸರ್ಕಾರದ ವಿರುದ್ಧದ ಹೋರಾಟಕ್ಕೆ ವಿನೂತನ ರೂಪುರೇಷೆ, ರಾಜ್ಯ ರಾಜಕೀಯದಲ್ಲಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಸಮಗ್ರ ಚರ್ಚೆಯಲ್ಲಿ ತೊಡಗಿದ್ದಾರೆ.