Tuesday, May 17, 2022

ಟೊಮ್ಯಾಟೋದಿಂದ ಟೊಮ್ಯಾಟೋ ಫ್ಲೂ ಬರುತ್ತದೆ- ಸಚಿವ ಮುನಿರತ್ನ ಹಾಸ್ಯಾಸ್ಪದ ಹೇಳಿಕೆ

Must read

ಬೆಂಗಳೂರು: ಕೊರೊನಾ ನಾಲ್ಕನೇ ಅಲೆಯ ಆತಂಕದ ನಡುವೆಯೇ ಕೇರಳದಲ್ಲಿ ಟೊಮ್ಯಾಟೋ ಫ್ಲೂ ಎನ್ನುವ ಹೊಸ ರೋಗ ಪತ್ತೆಯಾಗಿದೆ.

ಸದ್ಯ ಆತಂಕ ಹೆಚ್ಚಿಸಿರುವ ಟೊಮ್ಯಾಟೋ ಫ್ಲೂ ಸೋಂಕಿನ ಬಗ್ಗೆ ಉತ್ತರಿಸಲು ಸಚಿವ ಮುನಿರತ್ನ ತಡಬಡಿಸಿದ್ದು, ಹಾಸ್ಯಾಸ್ಪದ ಉತ್ತರ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟೊಮ್ಯಾಟೋದಿಂದ ಟೊಮ್ಯಾಟೋ ಫ್ಲೂ ಬರುತ್ತದೆ. ಫ್ಲೂ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ. ವರದಿ ಬರುವವರೆಗೂ ನಾವು ಯಾವ ನಿರ್ಧಾರ ಮಾಡುವುದಿಲ್ಲ. ಜನರಿಗೆ ಟೊಮ್ಯಾಟೋ ತಿನ್ನಿ, ತಿನ್ನಬೇಡಿ ಅಂತಾ ಹೇಳಲ್ಲ ಎಂದು ಹಾರಿಕೆ ಉತ್ತರ ನೀಡಿದ್ದಾರೆ.

ಇನ್ನು ಟೊಮ್ಯಾಟೋ ಫ್ಲೂ ಕೇರಳದ ಮಕ್ಕಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಕೇರಳ ಹಾಗೂ ಕರ್ನಾಟಕ ಗಡಿ ಭಾಗಗಳಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದೆ.

Latest article