ಮಂಡ್ಯ: ಗೃಹ ಸಚಿವ ಆರಗ ಜ್ಞಾನೇಂದ್ರ ಅರ್ಧ ಜ್ಞಾನ ಇರುವವರು ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮ್ಮದ್ ಹ್ಯಾರಿಸ್ ನಲಪಾಡ್ ವ್ಯಂಗ್ಯವಾಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಪೊಲೀಸ್ ಇಲಾಖೆ ನಡೆಸಲು ಸಚಿವರು ಲಾಯಕ್ ಇಲ್ಲ. ಮೊದಲು ಗೃಹ ಸಚಿವರನ್ನು ಬಂಧಿಸಿ ಎಂದು ಒತ್ತಾಯಿಸಿದ್ದಾರೆ.
ಪಿಎಸ್ಐ ನೇಮಕಾತಿ ಹಗರಣದಲ್ಲಿ ನಾಗಮಂಗಲದ ಕಾಂಗ್ರೆಸ್ ಮುಖಂಡ ಶರತ್ ಬಂಧನದ ಬಗ್ಗೆ ಮಾತನಾಡಿದ ನಲಪಾಡ್, ಯಾರೇ ತಪ್ಪು ಮಾಡಿದರೂ ಅವರಿಗೆ ಶಿಕ್ಷೆ ಆಗಲೇ ಬೇಕು. ಇದರಲ್ಲಿ ರಾಜಿ ಮಾತೇ ಇಲ್ಲ. ನಾವು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತೇವೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾರೇ ಆದರೂ ಅರೆಸ್ಟ್ ಮಾಡಬೇಕು. ಬಿಜೆಪಿಯ ಮಂತ್ರಿಗಳನ್ನು ಸಹ ಇದೇ ರೀತಿ ಸಿಐಡಿ ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.