Sunday, October 2, 2022

ಭಗವಂತ ಆಶೀರ್ವಾದ ಮಾಡಿದರೆ ಸಿದ್ದರಾಮಯ್ಯ ಸಿಎಂ ಆಗಲಿ- ಸಚಿವ ಶ್ರೀರಾಮುಲು

Must read

ಬಳ್ಳಾರಿ: ಭಗವಂತ ಆಶೀರ್ವಾದ ಮಾಡಿದರೆ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ ಎಂದು ಬಿಜೆಪಿ ಸಚಿವ ಶ್ರೀರಾಮುಲು ವಿಪಕ್ಷ ನಾಯಕ ಸಿದ್ದರಾಮಯ್ಯ ಪರ ಬ್ಯಾಟ್​ ಬೀಸಿದ್ದಾರೆ.

ಬಳ್ಳಾರಿ ಜಿಲ್ಲಾ‌ ಕುರುಬ ಸಂಘದ ವಿದ್ಯಾರ್ಥಿ ನಿಲಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶ್ರೀರಾಮುಲು, ಅವಕಾಶ ಬಂದರೆ‌ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ‌ ನನಗೂ ಇದೆ. ನಾನು ಮುಖ್ಯಮಂತ್ರಿ ಆಗಬೇಕು ಎನ್ನುವುದನ್ನು ಸಿದ್ದರಾಮಯ್ಯ ಕೂಡಾ ಒಪ್ಪುತ್ತಾರೆ. ಮುಂದೊಂದು ದಿನ ಸಿದ್ದರಾಮಯ್ಯ ಮತ್ತು ನಾನು ಒಂದೇ ವೇದಿಕೆಯಲ್ಲಿ ಬರುವವರು. ಹಿಂದುಳಿದ ವರ್ಗಗಳ ವಿಚಾರ ಬಂದರೆ ನಾನು ಸಿದ್ದರಾಮಯ್ಯ ಒಂದೇ. ಹಿಂದುಳಿದ ಜಾತಿಗಳನ್ನು ಒಂದು ಮಾಡುವ ಪ್ರಯತ್ನವನ್ನು ನಾನು ಮತ್ತು‌ ಸಿದ್ದರಾಮಯ್ಯ ಮಾಡುತ್ತಿದ್ದೇವೆ ಎಂದರು.

ಇನ್ನು ಸಿದ್ದರಾಮಯ್ಯ ಬದಾಮಿ ಕ್ಷೇತ್ರದಲ್ಲಿ ಹೇಗೆ ಗೆದ್ದರು ಎನ್ನುವುದನ್ನು ಹೋಗಿ ಅವರನ್ನು ಕೇಳಿ. ನಮ್ಮ ದೋಸ್ತಿ ಹೇಗಿದೆ ಎಂದು ಅವರೇ ಹೇಳುತ್ತಾರೆ. ನಾನು ಸಿದ್ದರಾಮಯ್ಯ ವಿರೋಧಿಯಲ್ಲ. ನೋಡಲು ಮಾತ್ರ ನಾವು ವಿರುದ್ಧ ಆದರೆ ನಮ್ಮ ದೋಸ್ತಿ ಬೇರೆಯೇ ಇದೆ. ನಾವಿಬ್ಬರೂ ರಾಜಕಾರಣದಲ್ಲಿ ಇರಬೇಕು. ನಾವಿಬ್ಬರೂ ವಿಧಾನಸೌಧದ ಒಳಗೆ ಇರಬೇಕು. ಹಿಂದುಳಿದ ವರ್ಗದಿಂದ ಅವಕಾಶ ಸಿಕ್ಕರೆ ನಾನು ಮುಖ್ಯಮಂತ್ರಿ ಆಗುವೆ. ಹಿಂದುಳಿದ ಸಮುದಾಯಗಳು ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಎಂದರು.

Latest article