Wednesday, June 29, 2022

ನಮ್ಮ ದೇವಸ್ಥಾನಗಳನ್ನು ವಾಪಸ್​ ತೆಗೆದುಕೊಂಡೇ ತೆಗೆದುಕೊಳ್ಳುತ್ತೇವೆ-ಕೆ.ಎಸ್​ ಈಶ್ವರಪ್ಪ

Must read

ಶಿವಮೊಗ್ಗ: 350 ವರ್ಷಗಳ ಹಿಂದೆ ಕಾಶಿ ವಿಶ್ವನಾಥನ ದೇವಸ್ಥಾನವನ್ನು ಔರಂಗಜೇಬ್ ಧ್ವಂಸ ಮಾಡಿದ್ದ. ಅಹಲ್ಯಾಬಾಯಿ ಹೋಲ್ಕರ್ ವಿಶ್ವನಾಥನ ದೇವಸ್ಥಾನ ಕಟ್ಟಿಸಿದ್ದರು. ಎಲ್ಲರೂ ಪಕ್ಷಭೇಧ ಮರೆತು ಈ ವಿಷಯದಲ್ಲಿ ಒಂದಾಗಬೇಕು. ಅಲ್ಲಿದ್ದ ಮಸೀದಿ ಹೊಡೆದು, ದೇವಸ್ಥಾನ ಸರ್ವೇ ಮಾಡಬೇಕು ಅಂದಾಗ ಅನೇಕ‌ ಬಾರಿ‌ ಹಲವರು ಪ್ರತಿಭಟನೆ ನಡೆಸಿದ್ದರು. ದೇಶದ್ರೋಹಿ ಓವೈಸಿ ಹಾಗೂ ಅವನ‌ ಅಣ್ಣ ತಮ್ಮಂದಿರು ಔರಂಗಜೇಬನ‌ ಸಮಾಧಿಗೆ ತೆರಳಿ ನಮಸ್ಕರಿಸುತ್ತಾರೆ. ನಮ್ಮ ದೇಶದಲ್ಲಿ ಇಂದಿಗೂ ಇಂತಹ‌ ದೇಶದ್ರೋಹಿಗಳು ಇದ್ದಾರೆ ಎಂದು ಕೆ.ಎಸ್​ ಈಶ್ವರಪ್ಪ ಕಿಡಿಕಾರಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸಲ್ಮಾನರಿಗೆ ಮೆಕ್ಕಾ ಪುಣ್ಯ ಕ್ಷೇತ್ರ, ಕ್ರಿಶ್ಚಿಯನ್ನರಿಗೆ ಜೆರುಸಲೇಂ ಪುಣ್ಯಕ್ಷೇತ್ರ. ಅದೇ ರೀತಿ‌ ಹಿಂದೂಗಳಿಗೆ ಕಾಶಿ,  ಅಯೋಧ್ಯೆ, ಮಥುರಾ ಪುಣ್ಯಕ್ಷೇತ್ರ. ನಿನ್ನೆ ಕಾಶಿಯಲ್ಲಿ 12 ಅಡಿ ಎತ್ತರದ ಈಶ್ವರ ಲಿಂಗ ಹೊರಗೆ ಬಂದಿದೆ. 36 ಸಾವಿರ ದೇವಸ್ಥಾನವನ್ನು ಈ ದೇಶದಲ್ಲಿ ಒಡೆದು ಹಾಕಿ ಅಲ್ಲಿ‌ ಮಸೀದಿ ಕಟ್ಟಿದ್ದಾರೆ. ಅಯೋಧ್ಯೆ ಕಳೆದುಕೊಂಡಿದ್ದೇವೆ, ಈಗ ಕಾಶಿ ಕಳೆದುಕೊಳ್ಳಲ್ಲ ಅಂತಾ ಒಬ್ಬ ಮೌಲ್ವಿ ಹೇಳ್ತಾನೆ. ಇವನು ಯಾವನು ಕಳೆದುಕೊಳ್ಳಲ್ಲ ಅಂತಾ ಹೇಳೋದಕ್ಕೆ. ಅವು ನಮ್ಮ ದೇವಸ್ಥಾನಗಳು ಅವುಗಳನ್ನು ನಾವು ವಾಪಸ್​ ತೆಗೆದುಕೊಂಡೇ ತೆಗೆದುಕೊಳ್ಳುತ್ತೇವೆ. ಕಾಶಿಯಲ್ಲಿ ನಂದಿ, ಶೃಂಗಾರ ಗೌರಿ, ಆಂಜನೇಯನ ವಿಗ್ರಹ ಪತ್ತೆಯಾಗಿದೆ. ಈಶ್ವರಲಿಂಗ ಇದ್ದ ಸ್ಥಳದ ಮೇಲೆ ನೀರನ್ನು ಇಟ್ಟು‌ ಅವರು ಮಸೀದಿಯೊಳಗೆ ಕಾಲು ತೊಳೆದುಕೊಂಡು ಹೋಗುತ್ತಿದ್ದರು ಅಂದರೆ ಅವರಿಗೆ ಇನ್ನೆಷ್ಟು ಸೊಕ್ಕು ಇರಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಮುಸಲ್ಮಾನರನ್ನು ತೃಪ್ತಿಪಡಿಸುವ ಮೂಲಕ ರಾಜಕೀಯ ಮಾಡಬೇಕು‌ ಎಂದುಕೊಂಡವರು ಮನಸ್ಥಿತಿ ಬದಲಾಯಿಸಿಕೊಳ್ಳಬೇಕು. ಹಿಂದೂ ಸಮಾಜಕ್ಕೆ ಅಪಮಾನ ಮಾಡಬೇಡ ಅಂತಾ ಹೇಳುವ ಧೈರ್ಯ‌ ಯಾವ ಕಾಂಗ್ರೆಸ್​ನ ನಾಯಕರಿಗಾದರೂ ಇದೆಯಾ..? ಕೋರ್ಟ್ ತೀರ್ಪು ಬಂದರೂ,  ತೀರ್ಪಿನ ವಿರುದ್ಧ ಮಾತನಾಡುತ್ತಾರೆ ಅಂದ್ರೆ ಇವರಿಗೆ ಸಂವಿಧಾನದ ಬಗ್ಗೆ, ಅಂಬೇಡ್ಕರ್ ಬಗ್ಗೆ ಗೌರವ ಇದೆಯಾ..? ರಾಷ್ಟ್ರ ದ್ರೋಹಿಗಳಿಗೆ ಕೆಲವರು ಬೆಂಬಲ ಕೊಡುತ್ತಿರುವುದರಿಂದ ಇನ್ನೂ ಕೆಲವು ರಾಷ್ಟ್ರ ದ್ರೋಹಿಗಳು ಉಸಿರಾಡುತ್ತಿದ್ದಾರೆ. ಕೋಮು ಸೌಹಾರ್ದ ಹೆಸರಿನಲ್ಲಿ ಹಿಂದೂಗಳಿಗೆ ಮಾತ್ರ ಬುದ್ದಿ‌ ಹೇಳುವ ಪ್ರಯತ್ನ ಬೇಡ.  ಶಾಂತಿಯಿಂದ ಇರುವುದು ಹಿಂದೂಗಳ ದೌರ್ಬಲ್ಯ ಅಲ್ಲ. ಮುಸಲ್ಮಾನರನ್ನು ನಾನು ದ್ವೇಷ ಮಾಡಲ್ಲ. ಇತ್ತೀಚಿಗೆ ಅವರು ಸಹ ಪರಿವರ್ತನೆ ಆಗುತ್ತಿದ್ದಾರೆ. ರಾಷ್ಟ್ರ ದ್ರೋಹ ಕೃತ್ಯಕ್ಕೆ ಕಾಂಗ್ರೆಸ್ ಬೆಂಬಲ‌ ಕೊಡಬೇಡಿ ಎಂದಿದ್ದಾರೆ.

Also read:  ವಾಟ್ಸಾಪ್​ ಗ್ರೂಪ್‌ನಲ್ಲಿ ಅಶ್ಲೀಲ ಫೋಟೋ ವೈರಲ್​ ಪ್ರಕರಣ: ಶಶಿಕಾಂತ್ ಪಾಟೀಲ್‌‌ ಸ್ಪಷ್ಟನೆ

Latest article