Sunday, October 2, 2022

ಜನರ ಬದುಕು ಅತಂತ್ರ: ಹಠಕ್ಕೆ ಬಿದ್ದು ಜನಸ್ಪಂದನ ಸಮಾವೇಶಕ್ಕೆ ನಿಂತ ಬಿಜೆಪಿ..!

Must read

ಬೆಂಗಳೂರು: ರಾಜ್ಯಾದ್ಯಂದ ನಿರೀಕ್ಷೆಗೂ ಮೀರಿ ಮಳೆಯಾಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬರದ ನಾಡು ಎನಿಸಿಕೊಂಡ ಭಾಗಗಳಲ್ಲೂ ಈ ಬಾರಿ ನಿರಂತರ ಮಳೆಯಾಗಿದ್ದು, ಜನ ಕಂಗಾಲಾಗಿದ್ದಾರೆ.

ವರುಣನ ಆರ್ಭಟಕ್ಕೆ ನೂರಾರು ಮನೆಗಳು ನೆಲಸಮವಾಗಿದ್ದು, ನೂರಾರು ಮಂದಿ ನೀರು ಪಾಲಾಗಿದ್ದಾರೆ. ಇನ್ನು ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಸಾಲ ಮಾಡಿ ಬೆಳೆ ಬೆಳೆದ ರೈತರ ಬದುಕು ಚಿಂತಾಜನಕ ಸ್ಥಿತಿ ತಲುಪಿದೆ. ಇದೆಲ್ಲದರ ಮಧ್ಯೆ ರಾಜ್ಯ ಬಿಜೆಪಿ ಸರ್ಕಾರ ಮಾತ್ರ ಹಠಕ್ಕೆ ಬಿದ್ದು, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅದ್ಧೂರಿ ಜನಸ್ಪಂದನೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಎರಡು ಬಾರಿ ಜನೋತ್ಸವ ಕಾರ್ಯಕ್ರಮ ರದ್ದುಗೊಂಡರೂ ಹಠಕ್ಕೆ ಬಿದ್ದ ಬಿಜೆಪಿ ನಾಯಕರು, ಇಂದು ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನೆ ಹೆಸರಿನಲ್ಲಿ ಕೋಟಿ ಕೋಟಿ ಹಣ ವ್ಯಹಿಸಿ ಸಮಾವೇಶ ನಡೆಸುತ್ತಿದ್ದಾರೆ.

ಸಮಾವೇಶದಲ್ಲಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಭಾಗಿಯಾಗುವ ನಿರೀಕ್ಷೆಯಿದ್ದು, ಜನರನ್ನ ಕರೆತರಲು ಐದು ಸಾವಿರ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. 40 ಎಕರೆ ಜಾಗದಲ್ಲಿ ವಿಶಾಲ ಪೆಂಡಾಲ್ ಹಾಕಲಾಗಿದ್ದು, ಜನರ ಸಂಕಷ್ಟದಲ್ಲೂ ಬಿಜೆಪಿ ಅದ್ಧೂರಿ ಸಮಾವೇಶ ನಡೆಸಲು ಭರ್ಜರಿ ತಯಾರಿ ನಡೆಸಿದೆ.

Latest article