Monday, November 29, 2021

ಪ್ಲಾಸ್ಟಿಕ್ ಕುದುರೆಯ ಮೇಲೆ ಕುಳಿತು, ಕೈಯಲ್ಲಿ ಪ್ಲಾಸ್ಟಿಕ್ ಖಡ್ಗ ಹಿಡಿದು ನಟಿಸಿದ ಮಾತ್ರಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದಲ್ಲ

Must read

ಅನೇಕ ಸ್ವಾತಂತ್ರ್ಯ ಸೇನಾನಿಗಳು ತಮ್ಮ ಜೀವ, ಜೀವನವನ್ನು ಮುಡಿಪಾಗಿಟ್ಟು ತ್ಯಾಗ ಹಾಗೂ ಬಲಿದಾನದ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಆದರೆ, ಆ ತ್ಯಾಗ ಹಾಗೂ ಬಲಿದಾನಗಳ ಹೊರತಾಗಿಯೂ ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು ಬಿಕ್ಷೆಯ ರೂಪದಲ್ಲಿ ಅಂತೆ. ಅಲ್ಲದೆ, 2014ರಲ್ಲಿ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ ಎಂದು ಪದ್ಮಶ್ರೀ ಪುರಸ್ಕೃತೆ ನಟಿ ಕಂಗನಾ ರನೌತ್​ ಟೈಮ್ಸ್​ನೌಗೆ ಕೊಟ್ಟಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಹೇಳಿಕೆ ದೇಶದಲ್ಲಿ ಅಪಾರ ವಿವಾದವನ್ನು ಸೃಷ್ಟಿಸುತ್ತಿದೆ. ಆಡಳಿತದಲ್ಲಿರುವ ಬಿಜೆಪಿಯಲ್ಲಿನ ಸ್ವಪಕ್ಷೀಯರೇ ಕಂಗನಾ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಬಿಜೆಪಿಯ ನಾಯಕರಾಗಿರುವ ವರುಣ್​ ಗಾಂಧಿಯವರು ಇದೊಂದು ಹುಚ್ಚು, ದೇಶದ್ರೋಹ ವಲ್ಲದೇ ಮತ್ತೇನು ಎಂದು ಹೇಳಿದ್ದಾರೆ. ಹಾಗೆಯೇ ಮತ್ತೋರ್ವ ಬಿಜೆಪಿ ನಾಯಕರಾಗಿರುವ ಪ್ರವೀಣ್ ಶಂಕರ್ ಕಪೂರ್, ಕಂಗನಾ ವಿರುದ್ಧ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ. ಕಾಂಗ್ರೆಸ್​, ಆಮ್​ ಆದ್ಮಿ  ಪಕ್ಷ ಸೇರಿ ಅನೇಕರು ಈ ಹೇಳಿಕೆಯನ್ನು ಖಂಡಿಸುತ್ತಿದ್ದಾರೆ.

ಆದರೆ, ಕಂಗನಾರ ಈ ಹೇಳಿಕೆ ಎಷ್ಟು ಸಮಂಜಸ. ಇದನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇದೆಯಾ..? ಈ ಹಿಂದೆ ಮಣಿಕರ್ಣಿಕಾ ಚಿತ್ರದಲ್ಲಿ ನಟಿಸಿದ್ದ ಕಂಗನಾ ರನೌತ್​, ಬ್ರಿಟಿಷರ ವಿರುದ್ಧ ಮೊಟ್ಟ ಮೊದಲ ಬಾರಿಗೆ ಖಡ್ಗ ಝಳಪಿಸಿದ ವೀರ ರಾಣಿ ಝಾನ್ಸಿ ರಾಣಿ ಲಕ್ಷ್ಮಿ ಬಾಯಿಯ ಪಾತ್ರದಲ್ಲಿ​ ಕಾಣಿಸಿಕೊಂಡಿದ್ದರು. ನೈಜವಾಗಿ ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಖಡ್ಗ ಝಳಪಿಸಿದ ಝಾನ್ಸಿ ಲಕ್ಷ್ಮಿ ಬಾಯಿಗೂ, ಪ್ಲಾಸ್ಟಿಕ್​ ಕುದುರೆಯ ಮೇಲೆ ಕುಳಿತು ಪ್ಲಾಸ್ಟಿಕ್​ ಖಡ್ಗದಿಂದ ಹೋರಾಟದ ನಟನೆ ಮಾಡುವ ಕಂಗನಾ ರನೌತ್​ಗೂ ಅಪಾರ ವ್ಯತ್ಯಾಸವಿದೆ. ವೀರ ರಾಣಿ ಝಾನ್ಸಿಯ ತ್ಯಾಗ ಬಲಿದಾನ ಒಬ್ಬ ನಿಜವಾದ ದೇಶ ಪ್ರೇಮಿಗಳಿಗೆ ಮಾತ್ರ ಅರ್ಥವಾಗಲು ಸಾಧ್ಯ.

Latest article