Sunday, October 2, 2022

‘ಸುಮಲತಾ ಪತಿ ರಾಜೀನಾಮೆ ಕೊಟ್ಟಿದ್ದೇಕೆ..? ಗೊತ್ತಿಲ್ಲದೆ ಇದ್ರೆ ಸಿದ್ದರಾಮಯ್ಯನ ಕೇಳಿ‘

Must read

ಮಂಡ್ಯ: ಸುಮಲತಾ ಪತಿ ವಸತಿ ಖಾತೆಗೆ ರಾಜೀನಾಮೆ ಕೊಟ್ಟಿದ್ದೇಕೆ..? ಎಂದು ಸಂಸದೆ ಸುಮಲತಾ ಅವರಿಗೆ ಜೆಡಿಎಸ್​ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರಶ್ನಿಸಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಲತಾ ಅವರ ಪತಿ ಯಾವ ಕಾರಣಕ್ಕೆ ವಸತಿ ಖಾತೆಗೆ ರಾಜೀನಾಮೆ ಕೊಟ್ರು..? ನಾನು ಒಂದು ವಾರದಿಂದಲೂ ನೋಡುತ್ತಿದ್ದೇನೆ. ಸುಮಲತಾ ಅವರಿಗೆ ಹಳೆಯದೆಲ್ಲಾ ಮರೆತು ಹೋಗಿದೆ. ಸಂಸದರಿಗೆ ರಾಜಕೀಯದ ಅನುಭವದ ಕೊರತೆ ಇದೆ. ಅವರ ಪತಿ ವಸತಿ ಖಾತೆಗೆ ರಾಜೀನಾಮೆ ಕೊಟ್ರಲ್ಲ. ಯಾವ ಕಾರಣಕ್ಕೆ ವಸತಿ ಖಾತೆಗೆ ರಾಜೀನಾಮೆ ಕೊಟ್ರು..? ಒಂದು ವೇಳೆ ಅವರಿಗೆ ಗೊತ್ತಿಲ್ಲದಿದ್ದರೆ ಸಿದ್ದರಾಮಯ್ಯನ ಕೇಳಿ ತಿಳಿದುಕೊಳ್ಳಲಿ ಎಂದರು.

ಇನ್ನು ಸುಮಲತಾ ಅವರ ಪತಿಯ ಮಂತ್ರಿಗಿರಿ ಹೋಗಿದ್ದು ಯಾಕೆ ಅಂತಾ ಕೇಳಿಕೊಂಡು ಬರಲಿ. ಸಿದ್ದರಾಮಯ್ಯ ಅವರು ಮಂತ್ರಿಗಿರಿಯಿಂದ ತೆಗೆದು ಹಾಕಿದ ಬಗ್ಗೆ ತಿಳಿಯಲಿ. ಆಮೇಲೆ ಮಂಡ್ಯದಲ್ಲಿ ಕೂತು ಚರ್ಚೆ ಮಾಡೋಣ. ಸುಮಲತಾ ಒಬ್ಬರು ರಾಜಕಾರಣಿ ಅಲ್ಲ. ಒಬ್ಬ ಚಿತ್ರ ನಟಿ. ಅವರಿಗೆ ಯಾರಾದರೂ ಏನಾದರೂ ಹೇಳಿಕೊಟ್ಟರೆ ಅದನ್ನು ಮಾತನಾಡುತ್ತಾರೆ ಅಷ್ಟೇ ಎಂದರು.

Latest article