Sunday, October 2, 2022

ಬಿಜೆಪಿ ಜನ ಸ್ಪಂದನ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ: ಇಂದು 9 ಜನ ಪುರೋಹಿತರಿಂದ ಗಣಹೋಮ

Must read

ಬೆಂಗಳೂರು: ಬಿಜೆಪಿ ಸರ್ಕಾರ ಮೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಜನ ಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ದೊಡ್ಡಬಳ್ಳಾಪುರದ ದೇವನಹಳ್ಳಿ ರಸ್ತೆಯ L&T ಮುಂಭಾಗದಲ್ಲಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ.

ಈ ಹಿಂದೆ ಜನೋತ್ಸವ ಕಾರ್ಯಕ್ರಮ ಎರಡು ಬಾರಿ ರದ್ದುಗೊಂಡಿದ್ದು, ಈ ಬಾರಿ ಜನಸ್ಪಂದನ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಇನ್ನು ಈ ಬಾರಿ ಕಾರ್ಯಕ್ರಮಕ್ಕೆ ಯಾವುದೇ ಅಡೆತಡೆ ಎದುರಾಗಬಾರದೆಂದು ಒಂಭತ್ತು ಜನ ಪುರೋಹಿತರಿಂದ ಗಣಹೋಮ ನಡೆಸಲಾಗಿದೆ.

ಸುಮಾರು 40 ಎಕರೆ ಜಾಗದಲ್ಲಿ ಬೃಹತ್ ಮಟ್ಟದ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಮೂರು ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್​ ಮಾಡಲಾಗಿದ್ದು, ಇಬ್ಬರು ಅಡಿಷನಲ್ ಎಸ್​ಪಿ, 12 ಡಿವೈಎಸ್‌ಪಿ, 35 ಸಿಪಿಐ, 100 ಪಿ‌ಎಸ್‌ಐ, 150 ಎಎಸ್‌ಐ, 1,200 ಪೋಲೀಸ್ ಕಾನ್ಸ್​ಸ್ಟೇಬಲ್​, 400 ಹೋಮ್ ಗಾರ್ಡ್ ಹಾಗೂ 4 ಕೆಎಸ್ಆರ್​ಪಿ ಮತ್ತು 6 ಡಿಎಆರ್​ಗಳನ್ನು ನಿಯೋಜನೆ ಮಾಡಲಾಗಿದೆ.

Latest article