Monday, November 29, 2021

ಜಮೀರ್​ ಹೊರಗಿಟ್ಟು ಕಾರ್ಯಕ್ರಮ..! ವಿಸ್ತರಿಸಿಕೊಂಡ ಕಾಂಗ್ರೆಸ್​​ ಬಣ ರಾಜಕೀಯ..!

Must read

ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್​​ ನಡುವಿನ ಬಣರಾಜಕೀಯ ಮುಸ್ಲಿಂ ನಾಯಕರಿಗೆ ವಿಸ್ತರಿಸಿಕೊಂಡಿದೆಯಾ..? ಹೀಗೊಂದು ಅನುಮಾನ ಕಾಡಲು ಶುರುವಾಗಿದೆ. ಜಮೀರ್ ಅಹ್ಮದ್ ಖಾನ್​​ ಹಾಗೂ ಶಾಸಕ ಹ್ಯಾರಿಸ್ ಬಣಗಳ ನಡುವೆ ಕೋಲ್ಡ್ ವಾರ್ ಶುರುವಾಗಿದೆ. ನಿನ್ನೆ ನಡೆದ ಅಲ್ಪಸಂಖ್ಯಾತ ಸಮುದಾಯದ ಪದಗ್ರಹಣ ಕಾರ್ಯಕ್ರಮದಲ್ಲಿ ಬಣ ರಾಜಕೀಯ ಕಣ್ಣಿಗೆ ರಾಚುವಂತಿತ್ತು.
ಅಲ್ಪಸಂಖ್ಯಾತ ನಾಯಕರಲ್ಲೂ ಶುರು ಕೋಲ್ಡ್ ವಾರ್..!
ಇಲ್ಲಿಯವರೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಡುವೆ ಕೋಲ್ಡ್ ವಾರ್ ನಡೆದಿತ್ತು.. ಇದಿಷ್ಟೇ ಅಲ್ಲಾ ಹಲವು ಹಿರಿಯರ ನಡುವೆಯೂ ಬಣರಾಜಕೀಯವಿತ್ತು. ಅದು ಈಗ ಪಕ್ಷದ ಸಣ್ಣ ಘಟಕಗಳಿಗೂ ವಿಸ್ತರಣೆಯಾಗಿದೆ. ಅಲ್ಪಸಂಖ್ಯಾತ ಸಮುದಾಯದ ನಾಯಕತ್ವಕ್ಕಾಗಿ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್​ ಹಾಗೂ ತನ್ವೀರ್ ಸೇಠ್ ನಡುವೆ ಕೋಲ್ಡ್ ವಾರ್ ನಡೆದಿತ್ತು. ನಂತರ ಅದು ಜಮೀರ್ v/s ಹ್ಯಾರೀಸ್ ಕೋಲ್ಡ್ ವಾರ್​​ಗೆ ತಿರುಗಿದೆ. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನದ ಆಯ್ಕೆ ವೇಳೆ ಜಮೀರ್​ ಆಪ್ತನಿಗೆ ತಪ್ಪಿಸಿ ಹ್ಯಾರೀಸ್ ಮಾಜಿ ಎಂಎಲ್​ಸಿ ಅಬ್ದುಲ್ ಜಬ್ಬಾರ್​ಗೆ ಅಧ್ಯಕ್ಷ ಸ್ಥಾನ ಕೊಡಿಸುವ ಮೂಲಕ ಜಮೀರ್ ಮೇಲಿನ ಸಿಟ್ಟು ತೋರಿಸಿಕೊಂಡಿದ್ದಾರೆ.
ಇನ್ನು ಅಲ್ಪಸಂಖ್ಯಾತರ ಪದಗ್ರಹಣ ಕಾರ್ಯಕ್ರಮವನ್ನ ಜಮೀರ್ ಹೊರಗಿಟ್ಟೇ ಹ್ಯಾರೀಸ್ ಮಾಡಿದ್ದಾರೆ. ಇದು ಜಮೀರ್​ಗೆ ಮತ್ತಷ್ಟು ಅಸಮಾಧಾನ ತಂದಿಟ್ಟಿದೆ. ಹೀಗಾಗಿ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಜಮೀರ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ರು. ತಮ್ಮ ನಾಯಕರನ್ನು ಕರೆಯದೆ ಕಾರ್ಯಕ್ರಮ ಮಾಡ್ತಿದ್ದೀರೆಂದು ಆರೋಪಿಸಿ ಘೋಷಣೆ ಕೂಗುವ ಮೂಲಕ ಆಕ್ರೋಶ ಹೊರಹಾಕಿದ್ರು. ಇನ್ನು ಕಾರ್ಯಕ್ರಮ ಪ್ರಾರಂಭವಾದಾಗಿನಿಂದ ಮುಗಿಯುವವರೆಗೂ ಜಮೀರ್ ಬೆಂಬಲಿಗರ ಪ್ರತಿಭಟನೆ ನಿಲ್ಲಲಿಲ್ಲ. ಪದೇ ಪದೇ ಘೋಷಣೆ ಕೂಗುವ ಮೂಲಕ ನಾಯಕರ ಭಾಷಣಕ್ಕೆ ಅಡ್ಡಿಪಡಿಸಿದ್ರು. ಸಿದ್ದರಾಮಯ್ಯ ಭಾಷಣದ ವೇಳೆಯೂ ಸುಮ್ಮನಾಗಲಿಲ್ಲ. ಕೂತ್ಕೊಳ್ರಯ್ಯ ಎಂದು ಹಲವು ಬಾರಿ ಹೇಳಿದ್ರೂ ಬೆಂಬಲಿಗರು ಡೋಂಟ್ ಕೇರ್ ಎಂದ್ರು. ಜಮೀರ್ ಪರ ಘೋಷಣೆ ಮುಂದುವರಿಸಿದ್ರು. ಇದ್ರಿಂದ ಬೇಸರಗೊಂಡ ಸಿದ್ದರಾಮಯ್ಯ ಭಾಷಣ ಮೊಟಕು ಗೊಳಿಸಿ ವೇದಿಕೆಯಿಂದ ನಿರ್ಗಮಿಸಿದ್ರು.
ಜಮೀರ್ ಬೆಂಬಲಿಗರು ಸಿದ್ದರಾಮಯ್ಯ ಭಾಣಣಕ್ಕೆ ಅಡ್ಡಿಪಡಿಸಿದ್ದಕ್ಕೆ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್​​ ಗರಂ ಆದರು. ನೀವು ಪ್ರತಿಪಕ್ಷ ನಾಯಕರ ಭಾಷಣಕ್ಕೆ ಅಡ್ಡಿಮಾಡ್ತೀರ.. ನೀವೆಲ್ಲ ಪಕ್ಷದ್ರೋಹಿಗಳು, ಕಾಂಗ್ರೆಸ್​​ನಲ್ಲಿ ವ್ಯಕ್ತಿ ಪೂಜೆ ಸರಿಯಲ್ಲ. ನಿಮ್ಮನ್ನೆಲ್ಲ ಪಕ್ಷದಿಂದಲೇ ಕಿತ್ತು ಹಾಕುತ್ತೇನೆ ಎಂದು ಎಚ್ಚರಿಸುತ್ತಿದ್ದಂತೆ ಬೆಚ್ಚಿಬಿದ್ದ ಜಮೀರ್​ ಬೆಂಬಲಿಗರು ಘೋಷಣೆ ಕೂಗುವುದನ್ನ ಬಿಟ್ಟು ಸುಮ್ಮನಾದ್ರು.
ಒಟ್ನಲ್ಲಿ ಹಿರಿಯರ ನಡುವಿನ ಬಣರಾಜಕೀಯ ಇದೀಗ ಸಮುದಾಯ ನಾಯಕತ್ವಕ್ಕೂ ಕಾಲಿಟ್ಟಿದೆ. ಅಲ್ಪಸಂಖ್ಯಾತ ಸಮುದಾಯದ ನಾಯಕತ್ವಕ್ಕಾಗಿ ಮುಖಂಡರ ನಡುವೆ ಕೋಲ್ಡ್ ವಾರ್ ಶುರುವಾಗಿದೆ. ಇತ್ತ ಸಿದ್ರಾಮಯ್ಯ ಜಮೀರ್ ಬೆಳೆಸಿದ್ರೆ, ಅತ್ತ ಡಿಕೆಶಿ ಹ್ಯಾರೀಸ್ ಬೆಳೆಸ್ತಿದ್ದಾರೆ. ಹೀಗಾಗಿ ಇಬ್ಬರು ಹಿರಿಯ ನಾಯಕರ ಕೋಲ್ಡ್ ವಾರ್ ಸಮುದಾಯದ ಮಟ್ಟಕ್ಕೂ ಬಂದು ನಿಂತಿದೆ.

Also read:  ಗೋಡೆ ಕುಸಿದು 7ಮಂದಿ ಸಾವಿಗೆ ತಲಾ ₹2ಲಕ್ಷ ಪರಿಹಾರ..! ಎಲ್ಲಿವೆ ಮೂರು ಕೋಟಿ ಪ್ರಧಾನಮಂತ್ರಿ ಆವಾಸ್​ ಯೋಜನೆಯ ಮನೆಗಳು..?
Also read:  ಗೋಡೆ ಕುಸಿದು 7ಮಂದಿ ಸಾವಿಗೆ ತಲಾ ₹2ಲಕ್ಷ ಪರಿಹಾರ..! ಎಲ್ಲಿವೆ ಮೂರು ಕೋಟಿ ಪ್ರಧಾನಮಂತ್ರಿ ಆವಾಸ್​ ಯೋಜನೆಯ ಮನೆಗಳು..?

 

Latest article