Monday, November 29, 2021

ಹಾಸ್ಯನಟ ವೀರ್ ದಾಸ್ ಭಯೋತ್ಪಾದಕ ಆಗುವುದಾದರೆ ಕಂಗನಾ ರಾಣಾವತ್​ ದೇಶಭಕ್ತೆ ಹೇಗಾದಳು..?

Must read

ಭಾರತ ವಿರೋಧಿ ಹೇಳಿಕೆಗಾಗಿ ಹಾಸ್ಯನಟ ವೀರ್ ದಾಸ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಮುಂಬೈನಲ್ಲಿ ಅವರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ. ವಾಷಿಂಗ್ಟನ್ DC ಯಲ್ಲಿನ ಜಾನ್ ಎಫ್ ಕೆನಡಿ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ ವೀರ್ ದಾಸ್ ತಮ್ಮ ಪ್ರದರ್ಶನದ ವೀಡಿಯೊವನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ನಂತರ ವಿವಾದ ಪ್ರಾರಂಭವಾಗಿದೆ. ಸದ್ಯ ಅವರ ವಿರುದ್ಧ ಎಫ್​ಐಆರ್​ ಕೂಡ ದಾಖಲಾಗಿದೆ. ಒಂದು ವೇಳೆ ವೀರ್​ ದಾಸ್​ ದೇಶ ವಿರೋಧಿ ಹಾಗೂ ದೇಶದ ಏಕತೆ, ಐಕ್ಯತೆ, ಘನತೆಗೆ ಧಕ್ಕೆತರುವಂತೆ ಏನಾದರೂ ಮಾತನಾಡಿದ್ದರೆ. ಅವರು ಶಿಕ್ಷೆಗೆ ಒಳಪಡಲೇ ಬೇಕು ಅದರಲ್ಲಿ ಎರಡು ಮಾತಿಲ್ಲ. ಆದರೆ 1947ರಲ್ಲಿ ಪಡೆದ ಸ್ವಾತಂತ್ರ್ಯ ಭಿಕ್ಷೆಯಾಗಿತ್ತು ಎಂದಿರುವ ಕಂಗನಾ ರಾಣಾವತ್​ನಂತಹ ನಟಿ ಈ ದೇಶಕ್ಕೆ ಘನತೆ ತಂದವರು ಹೇಗಾಗುತ್ತಾರೆ.
ಹಾಗಾದರೆ ಸರದಾರ್​ ಪಟೇಲರ 3,000 ಕೋಟಿಯ ಪ್ರತಿಮೆ ಯಾತಕ್ಕಾಗಿ..? ಸರ್ಕಾರ ಏಕೆ ಸ್ವಾತಂತ್ರ್ಯದ ಸುವರ್ಣ ಮಹೋತ್ಸವವನ್ನು ಆಚರಿಸಿತು..? ಏಕೆ ಪ್ರಧಾನಿಯವರು ಸ್ವಾತಂತ್ರ್ಯ ಹೋರಾಟಗಾರಿಗೆ ಶದ್ಧಾಂಜಲಿ ನೀಡಿದರು..? 2014ರಲ್ಲಿಯೇ ನಿಜವಾದ ಸ್ವಾತಂತ್ರ್ಯ ದೊರೆಯಿತು ಎಂದು ಕಂಗನಾ ಯಾವ ಆಧಾರದ ಮೇಲೆ ಹೇಳುತ್ತಾರೆ. ಇದು ದೇಶಭಕ್ತಿಯ ಸಾಲಿಗೆ ಹೇಗೆ ಸೇರುತ್ತದೆ..?
ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ವೀರ ಸ್ವಾತಂತ್ರ್ಯ ಹೋರಾಟಗಾರರು ನೀಡಿದ ಘೋಷಣೆಗಳು. ಅವರು ಹಾಡಿದ ಗೀತೆಗಳು ಎಲ್ಲವೂ ಭಿಕ್ಷೆ ಬೇಡುವ ಸಲುವಾಗಿಯೇ..? ಏಕೆ ಕಂಗನಾ ರಾಣಾವತ್​ರನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಏಕೆ ಬಂಧಿಸ ಬಾರದು..? ಈ ಕಾನೂನಿನ ಬಳಕೆ ಕೇವಲ ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ಪ್ರಶ್ನಿಸುವವರನ್ನು ಹತ್ತಿಕ್ಕಲು ಮಾತ್ರವೇ..? ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸ ಬೇಕಿದೆ.

Latest article