Tuesday, October 26, 2021

ಉಚಿತ ಕೋವಿಡ್ ಲಸಿಕೆ ನೀಡಿಕೆಯೇ ಇಂಧನ ದರ ಏರಿಕೆಗೆ ಕಾರಣವಾಗಿದ್ದರೆ, ಪಿಎಂ ಕೇರ್​ ಫಂಡ್​ ಕಥೆ ಏನಾಯಿತು..?

Must read

ಉಚಿತವಾಗಿ ಕೋವಿಡ್-19 ಲಸಿಕೆ ನೀಡಿದ್ದೇ ಇಂಧನ ದರ ಏರಿಕೆಗೆ ಕಾರಣ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯ ರಾಜ್ಯ ಖಾತೆ ಸಚಿವ ರಾಮೇಶ್ವರ್ ತೆಲಿ ಪ್ರತಿಪಾದಿಸಿದ್ದಾರೆ. ಅಸ್ಸಾಂನಲ್ಲಿ ವರದಿಗಾರರ ಜತೆ ಮಾತನಾಡಿರುವ ಅವರು, ‘ಇಂಧನ ಬೆಲೆ ಹೆಚ್ಚಿಲ್ಲ, ಅದು ತೆರಿಗೆಗಳನ್ನು ಒಳಗೊಂಡಿದೆ. ನೀವು ಉಚಿತ ಲಸಿಕೆಯನ್ನು ಪಡೆಯಬೇಕೆಂದರೆ, ಅದಕ್ಕೆ ಹಣ ಎಲ್ಲಿಂದ ಬರುತ್ತದೆ..? ಲಸಿಕೆಗೆ ನೀವು ಹಣ ಪಾವತಿಸಿಲ್ಲ. ಹಾಗಾಗಿ ತೆರಿಗೆ ಮೂಲಕ ಹಣ ಸಂಗ್ರಹಿಸಲಾಗಿದೆ’ ಎಂದು ಸಚಿವರು ಹೇಳಿದ್ದಾರೆ.

ಈ ಹೇಳಿಕೆಯ ಜೊತೆಗೆ ಮತ್ತೋರ್ವ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವರಾಗಿರುವ ನಿತಿನ್ ಗಡ್ಕರಿಯವರ ಹೇಳಿಕೆಯೂ ಮುಖ್ಯವಾಗಿದೆ. ಸೊಹ್ನಾದಲ್ಲಿ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ( ಡಿಎಂಇ )ಯ ಪ್ರಗತಿಯನ್ನು ಪರಿಶೀಲಿಸುವಾಗ , ರಸ್ತೆ ಸಾರಿಗೆ ಸಚಿವ ಗಡ್ಕರಿ ಅವರು ದೇಶದಲ್ಲಿ ಉತ್ತಮ ರಸ್ತೆ ಮೂಲಸೌಕರ್ಯ ಬೇಕಾದರೆ ಜನರು ಹೆಚ್ಚಿನ ತೆರಿಗೆಯನ್ನೂ ಪಾವತಿಸಬೇಕಾಗುತ್ತದೆ. ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಹೇಳಿದ್ದರು. ಮೊದಲನೆಯ ಪ್ರಶ್ನೆ ಏನೆಂದರೆ ಪ್ರತಿಯೊಬ್ಬ ಪ್ರಜೆಗಳು ವಾಹನಗಳನ್ನು ಖರೀದಿಸುವಾಗ ರೋಡ್​ ಟ್ಯಾಕ್ಸ್​ ಅನ್ನು ಕಟ್ಟಿರುತ್ತಾರೆ. ಜೊತೆಗೆ ಪೆಟ್ರೋಲ್​ ಮತ್ತು ಡೀಸೆಲ್​ನ ತೆರಿಗೆಯಲ್ಲೂ ರಸ್ತೆ ತೆರಿಗೆ ಒಳಗೊಂಡಿರುತ್ತದೆ. ​ಹೀಗಿರುವಾಗ ಉತ್ತಮ ರಸ್ತೆಗಳಿಗಾಗಿ ಪ್ರಜೆಗಳು ಮತ್ತೇ ಹೆಚ್ಚಿನ ತೆರಿಗೆ ಪಾವತಿಸ ಬೇಕು ಎನ್ನುವ ಕೇಂದ್ರ ಸಚಿವರ ಹೇಳಿಕೆ ಎಷ್ಟು ಜವಾಬ್ದಾರಿಯುತವಾದುದು..?

ಹಾಗೆಯೇ ಉಚಿತ ಲಸಿಕೆಯನ್ನು ನೀಡುತ್ತಿರುವುದರಿಂದಲೇ ಪೆಟ್ರೋಲ್​ ಮತ್ತು ಡೀಸೆಲ್​ನ ಬೆಲೆ ಹೆಚ್ಚಳವಾಗಲು ಕಾರಣ ಎನ್ನುತ್ತಿರುವುದು ಎಷ್ಟು ವಾಸ್ತವ..? ಹಾಗಾದರೆ ಪಿಎಂ ಕೇರ್​ ಫಂಡ್​ಗೆ ಭಾರತೀಯರು ದಾನವಾಗಿ ನೀಡಿದ ಹಣವೆಲ್ಲ ಏನಾಯಿತು..? ಎಲ್ಲಿ ಖರ್ಚಾಯಿತು..? ಅಲ್ಲದೇ ಸರ್ಕಾರವೇ ಹೇಳಿರುವಂತೆ  ಲಸಿಕೆಗಾಗಿ ಕಾದಿರಿಸಿದ 35,000 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ 9,222 ಕೋಟಿ ರೂಪಾಯಿಗಳನ್ನು ಹಣಮಾತ್ರವೇ ಲಸಿಕೆಗಾಗಿ ಖರ್ಚು ಮಾಡಿದೆ. ಹೀಗಿರುವಾಗ ಸರ್ಕಾರ ಪೆಟ್ರೋಲ್​ ಮತ್ತು ಡೀಸೆಲ್​ನಲ್ಲಿ ತೆರಿಗೆಯ ರೂಪದಲ್ಲಿ ಲಕ್ಷ ಲಕ್ಷ ಕೋಟಿ ರೂಪಾಯಿಗಳನ್ನು ಏಕೆ ಪೀಕುತ್ತಿದೆ..? ಈ ಲಕ್ಷಾಂತರ ಕೋಟಿ ಹಣವನ್ನು ಸರ್ಕಾರ ಎಲ್ಲಿ ಖರ್ಚು ಮಾಡುತ್ತಿದೆ ಹಾಗಾದರೆ..? ಪಿಎಂ ಕೇರ್​ ಫಂಡ್​ಗೆ ಜನರು ದಾನವಾಗಿ ನೀಡಿದ ಸಾವಿರಾರು ಕೋಟಿರೂಪಾಯಿ ಏನಾದವು..? ಈ ಪ್ರಶ್ನೆಗಳು ವಾಸ್ತವ ಅಲ್ಲವೇ..?

Also read:  ರಾಜ್ಯ ಹಾಗೂ ಚುನಾವಣಾ ಕ್ಷೇತ್ರದ ಸಮಸ್ಯೆಗಳನ್ನು ಬದಿಗಿರಿಸಿ, ಅಲ್ಪಸಂಖ್ಯಾತ ಓಲೈಕೆಗೆ ಹೆಣಗಾಡುತ್ತಿರುವ ವಿರೋಧ ಪಕ್ಷಗಳು..!

More articles

Latest article