Tuesday, May 17, 2022

ಸಮ್ಮಿಶ್ರ ಸರ್ಕಾರದಲ್ಲಿ ನಡೆದ ಹಗರಣಗಳ ದಾಖಲೆ ಬಿಡುಗಡೆ ಮಾಡಲಿ-ಹೆಚ್​.ಡಿ ರೇವಣ್ಣ

Must read

ಹಾಸನ: ಪಿಎಸ್​ಐ ಹಗರಣದಲ್ಲಿ ಜೆಡಿಎಸ್​, ಕಾಂಗ್ರೆಸ್​ ಯಾರೇ ಭಾಗಿಯಾಗಿದ್ದರೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಹೆಚ್​.ಡಿ ರೇವಣ್ಣ ಹೇಳಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ಹಗರಣದಲ್ಲಿ ಜೆಡಿಎಸ್, ಕಾಂಗ್ರೆಸ್ ಯಾರೇ ಭಾಗಿಯಾಗಿದ್ದರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಯಾರೋ ಬಡವರು ನಮ್ಮ ಮಕ್ಕಳು ಸಬ್‌‌ಇನ್ಸ್‌ಪೆಕ್ಟರ್ ಆಗುತ್ತಾರೆ ಎಂದು ಹೊಲ‌, ಮನೆ ಮಾರಿ ದುಡ್ಡು ಕೊಟ್ಟಿರುತ್ತಾರೆ. ಆ ದುಡ್ಡನ್ನು ವಾಪಸ್ ಕೊಡಿಸಬೇಕು. ಯಾರು ಅಪರಾಧಿಗಳಿದ್ದಾರೆ ಅವರನ್ನು ಬಲಿ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು ಸಮ್ಮಿಶ್ರ ಸರ್ಕಾರದಲ್ಲಿ ನಡೆದಿರುವ ಹಗರಣಗಳ ದಾಖಲೆ ಬಿಡುಗಡೆ ಮಾಡುತ್ತೇನೆ ಎಂಬ ಸಚಿವ ಅಶ್ವತ್ಥ್​​ ನಾರಾಯಣ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಯಾವ್ಯಾವ ಹಗರಣಗಳು ನಡೆದಿವೆ ಕೂಡಲೇ ದಾಖಲೆ ಬಿಡುಗಡೆ ಮಾಡಲಿ. ತನಿಖೆ ನಡೆಸಿ ಯಾರು ತಪ್ಪಿತಸ್ಥರಿದ್ದಾರೆ ಅವರನ್ನು ಬಲಿ‌ ಹಾಕಲಿ. ನನ್ನನ್ನು ಸೇರಿ ತನಿಖೆ ಮಾಡಲಿ. ನಾನು ಲೋಕೋಪಯೋಗಿ ಸಚಿನಾಗಿದ್ದೆ ನನ್ನನ್ನು ಸೇರಿಸಿ ತನಿಖೆ ನಡೆಸಿ. ಮುಖ್ಯಮಂತ್ರಿಗಳು ಸುಮೋಟೋ ತನಿಖೆ ಮಾಡಲು ಆದೇಶ ಮಾಡಲಿ. ಸಮ್ಮಿಶ್ರ ಸರ್ಕಾರದ ಹಗರದಣದ ಬಗ್ಗೆ ಈಗಿನ ಸರ್ಕಾರ ತನಿಖೆ ಮಾಡಲಿ. ನಮ್ಮ ರಾಜ್ಯದ ಪೊಲೀಸ್ ಇಲಾಖೆ ಅಧಿಕಾರಿಗಳು ದಕ್ಷರಿದ್ದಾರೆ. ಅವರು ಸಿಬಿಐಗಿಂತಲೂ ಚೆನ್ನಾಗಿ ತನಿಖೆ ಮಾಡುತ್ತಾರೆ. ನಾವು ರಾಜಕಾರಣಿಗಳು ಅವರಿಗೆ ತನಿಖೆಗೆ ಬೆಂಬಲ ಕೊಡಬೇಕು ಎಂದರು.

Latest article