Thursday, January 27, 2022

ಪಾದಯಾತ್ರೆಯಿಂದ ಏನೂ ಉಪಯೋಗವಿಲ್ಲ: ಕಾಂಗ್ರೆಸ್​ ವಿರುದ್ಧ ಹೆಚ್. ವಿಶ್ವನಾಥ್ ವ್ಯಂಗ್ಯ

Must read

ಮೈಸೂರು: ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆ ಸಮರ ಅಲ್ಲ, ಕಾನೂನು ಸಮರ ಆಗಬೇಕು. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಪಾದಯಾತ್ರೆ ಮಾಡಿದ್ದಾರೆ. ಇಂತಹ ಪಾದಯಾತ್ರೆಯಿಂದ ಏನೂ ಉಪಯೋಗವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಕಾಂಗ್ರೆಸ್​​ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರುಬಳ್ಳಾರಿ ರೆಡ್ಡಿಗಳಿಗೆ ಜೈಲು ಶಿಕ್ಷೆ ಆಗಿದ್ದು ಸಿದ್ದರಾಮಯ್ಯ ನಡೆಸಿದ ಪಾದಯಾತ್ರೆಯಿಂದಲ್ಲ. ಕಾನೂನು ಮೂಲಕ ರೆಡ್ಡಿಗಳಿಗೆ ಶಿಕ್ಷೆಯಾಯಿತು. ಮೇಕೆದಾಟು ವಿಚಾರ ಕೂಡ ಕಾನೂನು ಮೂಲಕವೆ ಬಗೆಹರಿಯಬೇಕು ಎಂದರು.

ಇಡೀ ರಾಜ್ಯಕ್ಕೆ ಲಾಕ್ ಡೌನ್ ಬೇಡ.ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಮಾತ್ರ ಕಠಿಣ ಕ್ರಮ ಕೈಗೊಳ್ಳಿ. ಸೋಂಕು ಹೆಚ್ಚಿಲ್ಲದ ಜಿಲ್ಲೆಗಳಲ್ಲಿ ಲಾಕ್ ಡೌನ್ ಬೇಡ. ವೀಕೆಂಡ್​​ ಕರ್ಫ್ಯೂನಿಂದ ಯಾವ ಪ್ರಯೋಜನಾವಾಗುತ್ತಿಲ್ಲ. ನಾವು ಅಂತರ ಜಿಲ್ಲಾ ಓಡಾಟಕ್ಕೆ ಕಡಿವಾಣ ಹಾಕಿಲ್ಲ. ಇದರಿಂದ ವೀಕೇಂಡ್ ಕರ್ಫ್ಯೂ ನಿಂದ ಉದ್ದೇಶ ಸಾಧನೆ ಆಗುತ್ತಿಲ್ಲ. ಜನ ವೀಕೆಂಡ್​​ ಕರ್ಫ್ಯೂ ಹೆಸರಲ್ಲಿ ಟ್ರೀಪ್ ಮಾಡುತ್ತಿದ್ದಾರೆ. ಕರ್ಫ್ಯೂ ಬಿಟ್ಟು ಜನರ ನಿಯಂತ್ರಣಕ್ಕೆ ಕಠಿಣ ಕ್ರಮ ಜರುಗಿಸಿ ಎಂದಿದ್ದಾರೆ.

Latest article