Wednesday, June 29, 2022

ಜನಗಳಿಗೆ ಕಾಂಗ್ರೆಸ್​ ಮೇಲೆ ವಿಶ್ವಾಸವಿದೆ, ಮುಂದಿನ ಚುನಾವಣೆಯಲ್ಲಿ ನಮ್ಮನ್ನೇ ಆಯ್ಕೆ ಮಾಡ್ತಾರೆ- ಜಿ.ಪರಮೇಶ್ವರ್

Must read

ತುಮಕೂರು: ನಾವಂತೂ ಯಾವ ಆಪರೇಷನ್ ಮಾಡುತ್ತಿಲ್ಲ. 2023ಕ್ಕೆ ಜನಗಳ‌ ಮುಂದೆ ಹೋಗುತ್ತೇವೆ. ಆಗ ಜನ ಯಾರನ್ನು ಆಯ್ಕೆ ಮಾಡುತ್ತಾರೆ ಎಂದು ಕಾದು ನೋಡಿ. ಜನಗಳಿಗೆ ನಮ್ಮ ಮೇಲೆ ವಿಶ್ವಾಸ ಇದೆ. ನಮ್ಮನ್ನೇ ಆಯ್ಕೆ ಮಾಡುತ್ತಾರೆ ಎಂದು ಮಾಜಿ.ಡಿ.ಸಿ.ಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ತುಮಕೂರಿನ ಕೊರಟಗೆರೆಯ ಸಿದ್ದರಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಕರ್ನಾಟಕ ವಿಭಾಗ ಆಗುವುದಿಲ್ಲ, ಆಗಬಾರದು. ಬಹಳ ಶ್ರಮದಿಂದ ಭಾಷಾವಾರು ಪ್ರಾಂತ್ಯದ ಆಧಾರದ ಮೇಲೆ. ಕರ್ನಾಟಕವನ್ನು ರಚನೆ ಮಾಡಿದ್ದಾರೆ. ಯಾವುದೋ ಒಂದು ಅಸಮಾಧಾನಕ್ಕೆ ಕರ್ನಾಟಕವನ್ನ ಹೊಡೆಯುವಂತ ಕೆಲಸವನ್ನು ಯಾರೂ ಮಾಡಬಾರದು ಎಂದರು.

ಪಠ್ಯಪುಸ್ತಕ ಹಿಂಪಡೆಯುವ ವಿಚಾರವಾಗಿ ಮಾತನಾಡಿದ ಅವರು, ಇದರಲ್ಲಿ ಹಠ ಮಾಡುವಂತಹದ್ದು ಏನು ಇಲ್ಲ. ಬಸವಣ್ಣನವರು ಯಾರು..? ಅವರ ಚಿಂತನೆಗಳೇನು ಎಂದು ಮುಂದಿನ ಪೀಳಿಗೆಗೆ ತಿಳಿಸಬೇಕು. ಇದರಲ್ಲಿ ರಾಜಕೀಯ ಮಾಡಲು ಏನಿದೆ. ಹಿಂದೆ ಯಾವ ರೀತಿಯಾಗಿ ಪಠ್ಯಪುಸ್ತಕ ಇತ್ತು ಅದನ್ನೇ‌ ಮುಂದುವರಿಸಬೇಕು.‌ ನಾನು ಕೂಡ ಅದನ್ನ ಆಗ್ರಹ ಮಾಡುತ್ತೇನೆ ಎಂದರು.

Latest article