Tuesday, August 16, 2022

ಮುಂದಿನ ಸಿಎಂ ಪರಮೇಶ್ವರ್​ ಎಂದು ಘೋಷಣೆ ಕೂಗಿದ ಬೆಂಬಲಿಗನಿಗೆ ಎಚ್ಚರಿಕೆ ಕೊಟ್ಟ ಪರಂ

Must read

ತುಮಕೂರು: ಹುಟ್ಟುಹಬ್ಬ ಆಚರಣೆ ವೇಳೆ ಮುಂದಿನ ಸಿಎಂ ಪರಮೇಶ್ವರ್​ ಎಂದು ಕೂಗಿದ ಅಭಿಮಾನಿಗೆ ಮಾಜಿ ಡಿಸಿಎಂ ಜಿ.ಪರಮೇಶ್ವರ್​ ಕೈ ಬೆರಳು ತೋರಿಸಿ ಎಚ್ಚರಿಕೆ ಕೊಟ್ಟಿದ್ದಾರೆ.

ತುಮಕೂರಿನ ಹೆಗ್ಗರೆ ಸಮೀಪದ ಸಿದ್ದಾರ್ಥ ನಗರದ ಜಿ.‌ಪರಮೇಶ್ವರ್ ಮನೆ ಬಳಿ ನೂರಾರು ಕಾಂಗ್ರೆಸ್​​ ಕಾರ್ಯಕರ್ತರು ಪರಮೇಶ್ವರ್ ಹುಟ್ಟುಹಬ್ಬ ಆಚರಿಸಿದ್ದು, ಕೇಕ್​ ಕತ್ತರಿಸುವ ವೇಳೆ ಮುಂದಿನ ಸಿಎಂ ಪರಮೇಶ್ವರ್​ ಎಂದು ಘೋಷಣೆ ಕೂಗಿದ್ದಾರೆ.

ಈ ವೇಳೆ ಜಿ.‌ಪರಮೇಶ್ವರ್  ಹೇ..ಎಂದು ಕೈ ಬೆರಳು ತೋರಿಸಿ ಘೋಷಣೆ ಕೂಗದಂತೆ ಕೈ ಸನ್ನೆ ಮೂಲಕ ಎಚ್ಚರಿಕೆ ಕೊಟ್ಟಿದ್ದಾರೆ.

Latest article