Thursday, January 20, 2022

ಪಾದಯಾತ್ರೆ ತಾವೇ ನಿಲ್ಲಿಸಿದ್ದು ಎಂಬ ಕ್ರೆಡಿಟ್​ ಪಡೆಯಲು ಜಿದ್ದಿಗೆ ಬಿದ್ದ ಸಚಿವರು..!

Must read

ಬೆಂಗಳೂರು: ಸರ್ಕಾರದ ಒತ್ತಾಯವೋ, ಹೈಕಮಾಂಡ್​ ಸೂಚನೆಯೋ ಒಟ್ಟಾರೆ ನಮ್ಮ ನೀರು ಹಕ್ಕು ಅಂತಾ ಪಾದಯಾತ್ರೆ ಆಂಭಿಸಿದ್ದ ಕಾಂಗ್ರೆಸ್​ ನಾಯಕರು ನಿನ್ನೆ ಪಾದಯಾತ್ರೆ ಮೊಟಕುಗೊಳಿಸಿದರು.

ಇತ್ತ ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆ ಮೊಟಕುಗೊಳ್ಳುತ್ತಿದ್ದಂತೆ ಅತ್ತ ತಾವೇ ನಿಲ್ಲಿಸಿದ್ದು ಎಂಬ ಸಂದೇಶವನ್ನು ಹೈಕಮಾಂಡ್​ಗೆ ರವಾನಿಸಲು ಬಿಜೆಪಿ ನಾಯಕರು ಜಿದ್ದಿಗೆ ಬಿದ್ದಿದ್ದಾರೆ.

ಸಚಿವರಾದ ಕೆ. ಸುಧಾಕರ್‌, ಅಶ್ವಥ್ ನಾರಾಯಣ್, ಅರಗ ಜ್ಞಾನೇಂದ್ರರ ನಡುವೆ ಪೈಪೋಟಿ ಜೋರಿದ್ದು, ಸಿಎಂ ಅನುಪಸ್ಥಿತಿಯಲ್ಲೂ ನಾವು ಪಾದಯಾತ್ರೆ ನಿಲ್ಲಿಸಿದ್ದೇವೆಂಬ ಸಂದೇಶ ರವಾನಿಸಿ ಹೈಕಮಾಂಡ್​ನಿಂದ ಕ್ರೆಡಿಟ್​ ಪಡೆಯಲು ಸ್ಪರ್ಧೆ ನಡೆಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್​ ಪಾದಯಾತ್ರೆ ನಿಲ್ಲಿಸಲು ಕ್ರಮತೆಗೆದುಕೊಳ್ಳುವಲ್ಲಿ ಸರ್ಕಾರ ವಿಫಲವಾದ ಕಾರಣ ‌ಕೋರ್ಟ್ ಮಧ್ಯಪ್ರವೇಶ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೋರ್ಟ್​ ಛೀಮಾರಿ ಹಾಕಿದ ನಂತರ ಎಚ್ಚೆತ್ತುಕೊಂಡಿದ್ದ ಸರ್ಕಾರ ತಕ್ಷಣವೇ ಪಾದಯಾತ್ರೆ ನಿಲ್ಲಿಸುವಂತೆ ಸೂಚನೆ ನೀಡಿತ್ತು. ಕೊನೆಗೂ ಕಾಂಗ್ರೆಸ್ ನಾಯಕರು ಮೊಟಕು ಗೊಳಿಸಿದ್ದರು ಹೀಗಾಗಿ ಸರ್ಕಾರ ಕೂಡ ಮುಜುಗರದಿಂದ ಪಾರಾಗಿತ್ತು.

Latest article