Tuesday, August 16, 2022

ಕಾಂಗ್ರೆಸ್​ ಶಕ್ತಿಯೇ ಈ ದೇಶದ ಶಕ್ತಿ..ಕಾಂಗ್ರೆಸ್​ ಇತಿಹಾಸವೇ ಈ ದೇಶದ ಇತಿಹಾಸ-ಡಿ.ಕೆ ಶಿವಕುಮಾರ್

Must read

ದಾವಣಗೆರೆ: ಇಂದು ನಾವು ನೀವೆಲ್ಲಾ ಬಹಳ ಪುಣ್ಯವಂತರು. ಈ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಆಗಿದೆ. ಅದೇ ಕಾಲದಲ್ಲಿ ನಮ್ಮ ನಿಮ್ಮೆಲ್ಲರ ನಾಯಕರಾದ ಸಿದ್ದರಾಮಯ್ಯನವರು ಕೂಡ ಹುಟ್ಟುಹಬ್ಬ ಆಚರಣೆಯನ್ನು ನಾವು ಮಾಡುತ್ತಿದ್ದೇವೆ. ದೇಶಕ್ಕೂ ಸಂಭ್ರಮ, ಕಾಂಗ್ರೆಸ್​ಗೂ ಸಂಭ್ರಮ, ಸಿದ್ದರಾಮಯ್ಯನವರಿಗೂ ಸಂಭ್ರಮ, ನಮಗೂ ಸಂಭ್ರಮ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಸಂತಸ ಹಂಚಿಕೊಂಡಿದ್ದಾರೆ.

ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಉದ್ದೇಶ ಈ ರಾಜ್ಯಕ್ಕೆ ನ್ಯಾಯ ಒದಗಿಸಬೇಕು. ಕಾಂಗ್ರೆಸ್​ ಶಕ್ತಿಯೇ ಈ ದೇಶದ ಶಕ್ತಿ. ಕಾಂಗ್ರೆಸ್​ ಇತಿಹಾಸವೇ ಈ ದೇಶದ ಇತಿಹಾಸ ಎಂದರು.

ಇನ್ನು ಸಿದ್ದರಾಮಯ್ಯನವರ ಅಧಿಕಾರ ನಾವು ನೋಡಿದ್ದೇವೆ. ಸಿದ್ದರಾಮಯ್ಯ ಬಸವ ಜಯಂತಿಯ ದಿನ ಅಧಿಕಾರಕ್ಕೆ ಬಂದರು. ಬಸವಣ್ಣನವರ ತತ್ವವೇ ಕಾಂಗ್ರೆಸ್​ ಪಕ್ಷದ ತತ್ವ. ಇದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ನಿಮ್ಮ ಆಸೆ ನೀವೆಲ್ಲಾ ವಿಧಾನ ಸೌಧದ ಮೂರನೇ ಮೆಟ್ಟಿಲಿನ ಮೇಲೆ ನಡೆದುಕೊಂಡು ಓಡಾಡಬೇಕು. ಅದಕ್ಕೆ ನಾವು ನೀವು ಈ ಭ್ರಷ್ಟ ಸರ್ಕಾರವನ್ನು ತೆಗೆದುಹಾಕಲು ಇಂದು ಸಂಕಲ್ಪ ಮಾಡಬೇಕು ಎಂದರು.

Latest article